ADVERTISEMENT

ಕಮತಗಿ | ಚೆಸ್ ತಾಳ್ಮೆ ಪರೀಕ್ಷಿಸುವ ಕ್ರೀಡೆ: ಹುಚ್ಚೇಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:29 IST
Last Updated 3 ಡಿಸೆಂಬರ್ 2025, 6:29 IST
ಕಮತಗಿ ಪಟ್ಟಣದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಏಕವಲಯ ಅಂತರ್ ಕಾಲೇಜುಗಳ ಚೆಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ತಂಡ
ಕಮತಗಿ ಪಟ್ಟಣದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಏಕವಲಯ ಅಂತರ್ ಕಾಲೇಜುಗಳ ಚೆಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ತಂಡ   

ಕಮತಗಿ (ಅಮಿನಗಡ): ಜೀವನದಲ್ಲಿ ಕಷ್ಟ, ನಷ್ಟಗಳು ಬರುವುದು ಸಹಜ. ತಾಳ್ಮೆಯಿಂದ ಜೀವನದ ಚೆಸ್ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಹುಚ್ಚೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಏಕ ವಲಯ ಅಂತರ್ ಕಾಲೇಜುಗಳ ಚೆಸ್ ಟೂರ್ನಮೆಂಟ್ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

ಚೆಸ್‌ ಮಾನಸಿಕ ಏಕಾಗ್ರತೆ ಹಾಗೂ ತಾಳ್ಮೆಯನ್ನು ಪರೀಕ್ಷಿಸುವ ಕ್ರೀಡೆಯಾಗಿದೆ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಳಾವತಿ, ದೈಹಿಕ ಶಿಕ್ಷಣ ಪರೀಕ್ಷಕ ಎ.ಎಚ್ ನದಾಫ, ಶಿರೂರಿನ ಬಿ.ಎಸ್ ಲೋಕಾಪುರ ಮಾತನಾಡಿದರು.

ಸಂಘದ ಸಹಕಾರ್ಯದರ್ಶಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ. ಪಿ, ಸುನೀಲ ನಾರಾಯಣಿ , ಚಿದಾನಂದ ನಂದಾರ, ಪ್ರಾಚಾರ್ಯ ಪಿ.ಎಂ. ಗುರುವಿನಮಠ ಸೇರಿದಂತೆ ವಿವಿಧ ಕಾಲೇಜುಗಳ ತರಬೇತಿದಾರರು, ವಿದ್ಯಾರ್ಥಿಗಳು ಇದ್ದರು.

ಚಾಂಪಿಯನ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ, ಬಾಗಲಕೋಟ.

ವಿಜೇತ ತಂಡಗಳು: ಪುರುಷರ ವಿಭಾಗ– ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ( ಪ್ರಥಮ), ಎಸ್.ಆರ್.ಕೆ.ಪಿ ಕಾಲೇಜು, ಮುಧೋಳ (ದ್ವಿತೀಯ), ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯ ಗುಳೇದಗುಡ್ಡ (ತೃತೀಯ).

ಮಹಿಳೆಯರ ವಿಭಾಗ– ಎಸ್.ಆರ್. ಕಂಠಿ ಕಾಲೇಜು ಮುಧೋಳ (ಪ್ರಥಮ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ (ದ್ವಿತೀಯ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ (ತೃತೀಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.