
ಕಮತಗಿ( ಅಮೀನಗಡ): ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನವು ಸಾಮರಸ್ಯದ ಸಂಕೇತವಾಗಿದೆ ಎಂದು ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಅಯ್ಯಪ್ಪ ಸ್ವಾಮಿಯ ನೂತನ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯು ಸರ್ವ ಭಕ್ತ ಸಮೂಹದ ಸಹಕಾರದೊಂದಿಗೆ ಈ ಭಾಗದಲ್ಲಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ನಿರ್ಮಿಸಿದೆ. ಸರ್ವಧರ್ಮ ಸಾಮರಸ್ಯಕ್ಕೆ ಹೆಸರಾಗಿರುವ ಈ ಭಾಗದಲ್ಲಿ ದೇವಸ್ಥಾನವು ಸಾಮರಸ್ಯದ ಸಂಕೇತವಾಗಿದೆ ಎಂದರು.
ಗುರುಸ್ವಾಮಿ ಆರ್. ನರಸಿಂಹಮೂರ್ತಿ ಮಾತನಾಡಿ ಮನುಷ್ಯತ್ವದಿಂದ ದೈವತ್ವದೆಡೆಗೆ ಇರುವ ಪವಿತ್ರ ವ್ರತಾಚರಣೆ ಸಮಾಜದ ಒಳಿತಿಗಾಗಿ ಇರಲಿ ಎಂದರು.
ಗುಳೇದಗುಡ್ಡ ಮುರಘಾಮಠದ ಕಾಶಿನಾಥ ಸ್ವಾಮೀಜಿ, ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮರೇಶ್ವರ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಯಲ್ಲಮ್ಮ ದೇವಿ ದೇವಸ್ಥಾನದ ಬಸವಣ್ಣೆಮ್ಮ ಬಸರಕೋಡ ಸಾನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಗಣೇಶ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಧ್ಯಾಪಕ ವಿಶ್ವನಾಥ ವಂಶಾಕೃತಮಠ,ದತ್ತಾತ್ರೇಯ ಸಿಂತ್ರೆ, ರಾಜು ಅಣವೇಕರ, ಕಲ್ಲಯ್ಯ ಧಾರವಾಡ, ಸುರೇಶಸ್ವಾಮಿ ದಿಡ್ಡಿಮನಿ, ಅನಿಲಕುಮಾರ ಹುಚ್ಚೇಶ್ವರಮಠ, ಶಿವು ಈಳಗೇರ, ಮಾರುತಿ ಚಿತ್ರಗಾರ, ಅಶೋಕ ಚಿತ್ರಗಾರ,ಅಶೋಕ ಬಟಕುರ್ಕಿ, ಮಂಜುನಾಥ ಶೆಟ್ಟಿ ಸೇರಿದಂತೆ ಮಾಲಾಧಾರಿಗಳು ಇದ್ದರು.
ಬೆಳಿಗ್ಗೆ ಅಯ್ಯಪ್ಪ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ಭಕ್ತ ಬಳಗದಿಂದ ಲಕ್ಷ ಬಿಲ್ವಾರ್ಚನೆ, ಹೋಮ ನಡೆಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ನೇರವಾದ ದಾನಿಗಳಿಗೆ ಸೇವಾ ಸಮಿತಿ ವತಿಯಿಂದ ಗೌರವಿಸಲಾಯಿತು. ಕೆಂಚಪ್ಪ ಮಾಗುಂಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಚ್ಚೇಶ ಲಾಯದಗುಂದಿ, ಶ್ರೇಯಾಂಶ ಕೋಲಾರ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.