ಮಹಾಲಿಂಗಪುರ ಸಮೀಪದ ಅಕ್ಕಿಮರಡಿಯಲ್ಲಿ ನಡೆದ ರನ್ನ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸಿದ್ದು ದಿವಾಣ ಮಾತನಾಡಿದರು
ಮಹಾಲಿಂಗಪುರ: ‘ಯುವ ಪೀಳಿಗೆಯ ಓದು, ಬರಹ, ಮಾತು ಹಾಗೂ ಹವ್ಯಾಸಗಳನ್ನು ಗಮನಿಸಿದಾಗ ಕೆಲವೇ ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಮರೆಯಾಗುವ ಸ್ಥಿತಿ ಬರಬಹುದು’ ಎಂದು ಮುಧೋಳದ ಸಾಹಿತಿ ಸಿದ್ದು ದಿವಾಣ ಕಳವಳ ವ್ಯಕ್ತಪಡಿಸಿದರು.
ಸಮೀಪದ ಅಕ್ಕಿಮರಡಿಯಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸಂಗಮೇಶ್ವರ ಸಂಸ್ಕೃತ ಪಾಠಶಾಲೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ರನ್ನ ಕನ್ನಡ ಸಂಘ’ದ 2025-26ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಓದು, ಮಾತು ಹಾಗೂ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಆಗ ಮಾತ್ರ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಸಾಧ್ಯವಿದೆ’ ಎಂದು ತಿಳಿಸಿದರು.
ವಿಕ್ರಮ ಬಸನಗೌಡರ, ಜಾನಪದ ಸಾಹಿತಿ ರಾಮಣ್ಣ ಕೊಣ್ಣೂರ ಮಾತನಾಡಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಶಂಕರ ಸುತಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಿ.ಎನ್. ಈರಗಾರ, ಸಂಗಮೇಶ್ವರ ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಮಹಾಂತೇಶ ಅಂಗಡಿ, ಶಿವಾಜಿ ಚವಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.