ಹುನಗುಂದ: ‘ಸೆಷನ್ ಟ್ರಯಲ್ ಎನ್ನುವುದು ಕರ್ನಾಟಕದಲ್ಲಿ ಈಗ ಅರ್ಥ ಕಳೆದುಕೊಂಡಿದೆ. ನ್ಯಾಯಾಲಯಗಳಲ್ಲಿ ಇಂದು ತ್ವರಿತವಾಗಿ ಪ್ರಕರಣಗಳು ಇತ್ಯರ್ಥ ಆಗುತ್ತಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಬೇಸರ ವ್ಯಕ್ತಪಡಿಸಿದರು.
ಶನಿವಾರ ಬಿ.ವಿ.ದೇಶಪಾಂಡೆ ಅಸೋಸಿಯೇಟ್ಸ್, ವಕೀಲರ ಸಂಘ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಕೀಲ ಬಿ. ವಿ.ದೇಶಪಾಂಡೆ ಅವರ 15ನೇ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪೊಲೀಸರ ನಿಷ್ಕ್ರಿಯತೆ, ಪ್ರಾಸಿಕ್ಯೂಟರ್ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ಪ್ರಕರಣಗಳು ನಿಧಾನಗತಿಯಲ್ಲಿ ಇತ್ಯರ್ಥ ಆಗುತ್ತಿವೆ’ ಎಂದರು.
ನಂತರ ಸೆಷನ್ ಟ್ರಯಲ್ ಮತ್ತು ವೈದ್ಯಕೀಯ ನ್ಯಾಯಶಾಸ್ತ್ರ ಕುರಿತು ಅವರು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಮಾತನಾಡಿ, ‘ಬಿ. ವಿ.ದೇಶಪಾಂಡೆ ಅವರ ನ್ಯಾಯನಿಷ್ಠೆ, ಮಾನವೀಯತೆ ಇತರಿಗೆ ಮಾದರಿ’ ಎಂದರು.
ವಕೀಲ ವಿ.ಬಿ.ವೆಂಕಟೇಶ ಪ್ರಾಸ್ತಾವಿಕ ಮಾತನಾಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎ.ಮೂಲಿಮನಿ ಹಾಗೂ ಹುನಗುಂದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ದೇಶಪಾಂಡೆ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿದರು.
35ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಹಿರಿಯ ವಕೀಲರು ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರನ್ನು ಸನ್ಮಾನಿಸಲಾಯಿತು.
ಇಳಕಲ್ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಹೊಸೂರ, ಕೆ.ವಿ.ಕೆರೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.