ADVERTISEMENT

ಎಸ್‌ಎಸ್‌ಎಲ್‌ಸಿ: ಶೇ 85ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 13:55 IST
Last Updated 2 ಮೇ 2025, 13:55 IST
ಅಕ್ಷಯ ಕಲ್ಲಕುಟಕರ
ಅಕ್ಷಯ ಕಲ್ಲಕುಟಕರ   

ಗುಳೇದಗುಡ್ಡ: ಪಟ್ಟಣದ ಸರಸ್ವತಿ ವಿದ್ಯಾ ಸಂಸ್ಥೆಯ ಮ.ಹು. ಆಡಿನ ಪ್ರೌಢ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯ ಶಾಲೆಯ ಒಟ್ಟು ಫಲಿತಾಂಶ ಶೇ 85ರಷ್ಟು ಆಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ಅಕ್ಷಯ ಸುರೇಶ ಕಲ್ಲಕುಟಕರ ಶೇ 97.76 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಧನಾ ಮಲ್ಲಿಕಾರ್ಜುನ ನೀಲನೂರ ಶೇ 96.96ರಷ್ಟು ಅಂಕಗಳನ್ನು ಪಡೆದು ಶಾಲೆಗೆ ದ್ವಿತ್ವೀಯ ಸ್ಥಾನ ಪಡೆದಿದ್ದಾಳೆ. ಸೌಮ್ಯ ಸುರೇಶ ಮೇಂತೆದ ಶೇ 96.64ರಷ್ಟು ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ.

ಅತ್ಯುನ್ನತ ದರ್ಜೆಯಲ್ಲಿ 13 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 19 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 5 ವಿದ್ಯಾರ್ಥಿಗಳು, ಉತ್ತೀರ್ಣರಾಗಿ, ಶಾಲೆಗೆ ಕೀರ್ತಿ ತಂದಿದ್ದಾರೆ.

ADVERTISEMENT

ಶಾಲೆಯ ಅಧ್ಯಕ್ಷರಾದ ಘನಶ್ಯಾಮದಾಸಜಿ ರಾಠಿ, ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು, ಶಾಲಾ ಮುಖ್ಯೋಪಾದ್ಯಾಯರು ಎನ್.ವಿ. ದೊಡಮನಿ ಹಾಗೂ ಪಿ.ಆರ್. ಬಂತಲ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಸಾಧನಾ ನೀಲನೂರ
 ಸೌಮ್ಯ ಮೇಂತೆದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.