ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ ಹಿಂಭಾಗದಲ್ಲಿರುವ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದ ಕೃಷ್ಣಾ ನದಿಯ ತೀರದಲ್ಲಿ ಶನಿವಾರ ಕೃಷ್ಣಾ ಆರತಿ ನೆರವೇರಿತು. ವರ್ಣರಂಜಿತ ಬೆಳಕಿನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಂ.ಆರ್.ಎನ್. ನಿರಾಣಿ ಫೌಂಡೇಶನ್ ಮತ್ತು ರೈತರ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮುರಗೇಶ ನಿರಾಣಿಯವರ 60ನೇ ಜನ್ಮ ದಿನ ಅಂಗವಾಗಿ ಹಮ್ಮಿಕೊಂಡಿರುವ ಕೃಷ್ಣಾ ಆರತಿ ಸಂಭ್ರಮದಿಂದ ನೆರವೇರಿತು. ಉತ್ತರ ಭಾರತದ ಅರ್ಚಕರು ಮಂತ್ರ, ಗಂಟೆಯ ನಾದ, ಶಂಖನಾದದೊಂದಿಗೆ ದೊಡ್ಡದಾದ ಆರತಿ ಹಿಡಿದು ಬೆಳಗಿದರು. ಆಗ ಕೃಷ್ಣೆಗೆ ಜಯಘೋಷಗಳು ಮೊಳಗಿದವು. ಎಂ.ಆರ್.ಎನ್. ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ನದಿಯಲ್ಲಿ ಬಾಗಿನ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.