ADVERTISEMENT

ಬಸ್ ಟಿಕೆಟ್ ದರ ಶೇ 10ರಿಂದ 15ರಷ್ಟು ಹೆಚ್ಚಳಕ್ಕೆ ಪ್ರಸ್ತಾವ: ಶಿವಯೋಗಿ ಕಳಸದ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 15:38 IST
Last Updated 11 ಜೂನ್ 2021, 15:38 IST
ಶಿವಯೋಗಿ ಕಳಸದ
ಶಿವಯೋಗಿ ಕಳಸದ   

ಬಾಗಲಕೋಟೆ: ‘ಸಾರಿಗೆ ಸಂಸ್ಥೆಯ ಪ್ರಯಾಣ ದರವನ್ನು ಶೇ 10ರಿಂದ 15ರಷ್ಟು ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಿನ್ನೂ ಪರಿಶೀಲನೆ ಹಂತದಲ್ಲಿದೆ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

ಕೋವಿಡ್ ಲಾಕ್‌ಡೌನ್‌ ಕಾರಣ ಸಾರಿಗೆ ಸಂಸ್ಥೆಗೆ ನಿತ್ಯ ₹20 ಕೋಟಿ ಆದಾಯ ಖೋತಾ ಆಗುತ್ತಿದೆ. ಸಂಸ್ಥೆ ವ್ಯಾಪ್ತಿಯ ನಾಲ್ಕು ನಿಗಮಗಳ 1.15 ಲಕ್ಷ ಸಿಬ್ಬಂದಿಗೆ ವೇತನ ನೀಡಲು ಪ್ರತಿ ತಿಂಗಳು ₹300 ಕೋಟಿ ಅಗತ್ಯವಿದೆ. ಅದನ್ನು ಈಗ ಸರ್ಕಾರವೇ ಭರಿಸುತ್ತಿದೆ. ಈಗ ಆಗಿರುವ ನಷ್ಟ ತುಂಬಿಕೊಳ್ಳಲು ಪ್ರಯಾಣ ದರವನ್ನು ಶೇ 50 ರಷ್ಟು ಹೆಚ್ಚಳಗೊಳಿಸಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಲಾಕ್‌ಡೌನ್ ಹಿಂತೆಗೆದುಕೊಂಡು ಸರ್ಕಾರ ಅನುಮತಿ ನೀಡಿದ ನಂತರ ಹಂತ ಹಂತವಾಗಿ ಬೇಡಿಕೆ ಆಧರಿಸಿ ಬಸ್‌ಗಳ ಓಡಾಟ ಆರಂಭಿಸಲಾಗುವುದು. ಆರಂಭದಲ್ಲಿ ಜಿಲ್ಲೆಗಳ ಒಳಗೆ ಬಸ್‌ಗಳ ಓಡಾಟಕ್ಕೆ ಅವಕಾಶವಾಗಬಹುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.