
ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಶಿವರಾತ್ರಿ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾನುವಾರ ಭೇಟಿ ನೀಡಿದರು.
ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಸಂಗಮನಾಥ ದೇಗುಲ ಹಾಗೂ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದು ಶಿವರಾತ್ರಿ ಆಚರಿಸಲಾಯಿತು.
ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ದೇವಾಲಯ ಆವರಣದಲ್ಲಿ ಹಣ್ಣು, ಸಿಹಿಭೋಜನ ಸವಿದರು. ನದಿಯ ದಡದಲ್ಲಿ ಶಿವನಾಮ ಸ್ಮರಣೆ ಮಾಡಿದರು. ಸಂಗಮನಾಥನ ಮೂರ್ತಿಗೆ ವಿಶೇಷ ಅಭಿಷೇಕ ಮಾಡಿಸಿದರು.
ಶನಿವಾರ ರಾತ್ರಿಯೇ ಕೆಲವು ಭಕ್ತರು ಆಗಮಿಸಿ, ದೇವಾಲಯ ಆವರಣದಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಿಗ್ಗೆ ಭಕ್ತರು ದರ್ಶನಕ್ಕೆ ಬರಲಾರಂಭಿಸಿದರು. ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣ, ದರ್ಶನಕ್ಕಾಗಿ ಒಂದು ತಾಸು ಸರದಿಯಲ್ಲಿ ನಿಲ್ಲಬೇಕಾಯಿತು. ಅರ್ಚಕ ಕರಸಂಗಯ್ಯ ಗುಡಿ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ದೇವಾಲಯದ ಮುಂಭಾಗದಲ್ಲಿ ಹಣ್ಣುಗಳ ವ್ಯಾಪಾರ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.