ADVERTISEMENT

ಮಹಾಲಿಂಗಪುರ: ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 16:25 IST
Last Updated 28 ಡಿಸೆಂಬರ್ 2020, 16:25 IST
ಮಹಾಲಿಂಗಪುರ ಲಕ್ಷ್ಮೀದೇವಿ ಜಾತ್ರಾ ನಿಮಿತ್ತ ಅರ್ಚಕಿ ಶಾಂತವ್ವ ನಂದಿ ಅವರು ಅಗ್ನಿಕುಂಡ ಹಾಯ್ದರು
ಮಹಾಲಿಂಗಪುರ ಲಕ್ಷ್ಮೀದೇವಿ ಜಾತ್ರಾ ನಿಮಿತ್ತ ಅರ್ಚಕಿ ಶಾಂತವ್ವ ನಂದಿ ಅವರು ಅಗ್ನಿಕುಂಡ ಹಾಯ್ದರು   

ಮಹಾಲಿಂಗಪುರ: ಸ್ಥಳೀಯ ಶಾಂತಿನಿಕೇತನ ಕಾಲೊನಿಯ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಜಾತ್ರೆಯ ನಿಮಿತ್ತ ಬೆಳಿಗ್ಗೆ 6 ಘಂಟೆಗೆ ಅಯ್ಯಪ್ಪ ಮಾಲಾಧಾರಿಗಳಿಂದ ರುದ್ರಾಭಿಷೇಕ, 10 ಘಂಟೆಗೆ ಮಹಾಪೂಜೆ, 11 ಘಂಟೆಗೆ ಉಡಿತುಂಬವ ಕಾರ್ಯಕ್ರಮಗಳು ಜರುಗಿದವು.

12 ಘಂಟೆಗೆ ಲಕ್ಷ್ಮಿದೇವಿಯ ಅರ್ಚಕಿ ಶಾಂತವ್ವ ನಂದಿಯವರು ಅಗ್ನಿಕುಂಡ ಹಾಯ್ದು ಭಕ್ತಿ ಮೆರೆದರು. ನಂತರ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಭಕ್ತರ ಭಾಗ್ಯದಾತೆ, ಮಹಿಮಾಶಾಲಿ ಲಕ್ಷ್ಮೀದೇವಿಯ ಜಾತ್ರೆಗೆ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಊರುಗಳ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT