ADVERTISEMENT

ಕನ್ನಡ ಭವನಕ್ಕೆ ಜಾಗ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:57 IST
Last Updated 20 ಅಕ್ಟೋಬರ್ 2020, 15:57 IST
ಜಮಖಂಡಿ ಕನ್ನಡ ಸಂಘದ ಪಧಾಧಿಕಾರಿಗಳು ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ್‌ ಸಂಜಯ ಇಂಗಳೆಯವರಿಗೆ ಮನವಿ ಸಲ್ಲಿಸಿದರು
ಜಮಖಂಡಿ ಕನ್ನಡ ಸಂಘದ ಪಧಾಧಿಕಾರಿಗಳು ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ್‌ ಸಂಜಯ ಇಂಗಳೆಯವರಿಗೆ ಮನವಿ ಸಲ್ಲಿಸಿದರು   

ಜಮಖಂಡಿ: ಕನ್ನಡ ಸಂಘದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತನ್ನದೇ ಆದ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಜಮಖಂಡಿ ತಾಲ್ಲೂಕಾ ಕ್ರೀಡಾಂಗಣದಲ್ಲಿ ಅಥವಾ ಯಾವುದೇ ಸೂಕ್ತ ಸ್ಥಳದಲ್ಲಿ ಕನಿಷ್ಟ 100x100 ಅಳತೆಯ ಸ್ಥಳವನ್ನು ಕನ್ನಡ ಸಂಘದ ಕನ್ನಡ ಭವನವನ್ನು ನಿರ್ಮಿಸಲು ಒದಗಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಸಂಜಯ ಇಂಗಳೆಯವರಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು.

ಅಧ್ಯಕ್ಷ ಜಗದೀಶ ಗುಡಗುಂಟಿ ಮಾತನಾಡಿ, ಕನ್ನಡ ಸಂಘ ಕಳೆದ 50 ವರ್ಷದಿಂದ ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಇತರ ಹಲವಾರು ಕಾರ್ಯ ಚಟು
ವಟಿಕೆಗಳನ್ನು ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು
ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸ್ವಂತ ಕಟ್ಟಡ ನೆರವಾಗಲಿದೆ ಎಂದರು.

ಉಪಾಧ್ಯಕ್ಷ ಜಿ.ಎಸ್. ನ್ಯಾಮಗೌಡ, ಕೋಶಾಧ್ಯಕ್ಷ ಸದಾನಂದ ಕೌಲಗಿಕರ, ಶ್ರೀಶೈಲ ಜಂಬಗಿ, ಸಂಗು ಮುತ್ತಿನಕಂತಿಮಠ, ಮಲ್ಲೇಶಿ ಹೆಸಮನಿ, ಮೋಹನ ಸಾವಂತ, ಚನ್ನಪ್ಪ ಬಾಂಗಿ, ಡಾ. ಮಲ್ಲಿಕಾರ್ಜುನಯ್ಯ ಮಠ, ವಿನೋದ ಲೋಣಿ, ರಾಜು ಪಿಸಾಳ ಇತರರು ಈ ಸಂದರ್ಭದಲ್ಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.