ಮಹಾಲಿಂಗಪುರ: ಪಟ್ಟಣದ ಟೊಣಪಿನಾಥ ದೇವಸ್ಥಾನದಲ್ಲಿ ಅ.8 ರಂದು ಬೆಳಿಗ್ಗೆ 10 ಗಂಟೆಗೆ ಜಮಖಂಡಿ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ.
ಧಾರವಾಡದ ಡಾ.ಮಹೇಶ ಮಾಶಾಳ ಪ್ರತಿನಿಧಿಗಳಿಗೆ ತರಬೇತಿ ನೀಡಲಿದ್ದಾರೆ. ಪ್ರತಿನಿಧಿಗಳ ಪ್ರತಿಭಾವಂತ ಮಕ್ಕಳನ್ನು ಮತ್ತು ವಿಶೇಷ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಸನ್ಮಾನ ಮಾಡಲಾಗುವುದು. ಜಮಖಂಡಿ ಶಾಖೆಯ ಎಲ್ಲ ಎಲ್‌ಐಸಿ ಪ್ರತಿನಿಧಿಗಳು ಈ ಸಭೆಗೆ ಹಾಜರಾಗಬೇಕು ಎಂದು ಸಂಘದ ಅಧ್ಯಕ್ಷ ಮಲ್ಲಪ್ಪ ಕುಂಚನೂರ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.