ಮಾತೆ ಗಂಗಾದೇವಿ
ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಕೊಲ್ಹಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧಿಪತಿಗಳನ್ನು ಅವಹೇಳನ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಅವರು ಹತಾಶಗೊಂಡಿದ್ದಾರೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅಭಿಪ್ರಾಯಪಟ್ಟರು.
ಮಂಗಳವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀಗಳು ಬಳಸಿದ ಪದಗಳು ಅಸಾಂವಿಧಾನಿಕವಾಗಿದ್ದು, ಅವರ ಪದಗಳೇ ಅವರ ಯೋಗ್ಯತೆಯನ್ನು ತಿಳಿಸುತ್ತವೆ. ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಮಠದ ಸಂಸ್ಕೃತಿಯನ್ನು ಬಿಟ್ಟು ರಾಜಕೀಯ ಪಕ್ಷದ ಗುಲಾಮರಾಗಿ ಲಿಂಗಾಯತ ಮಠಾಧೀಶರನ್ನು ಟೀಕಿಸಿರುವುದು ಸರಿಯಲ್ಲ’ ಎಂದರು.
‘ಲಿಂಗಾಯತ ಮಠಾಧೀಶರು ಯಾವ ರಾಜಕೀಯ ಪಕ್ಷದ ಕೃಪಾಪೋಷಣೆಯಲ್ಲಿಯೂ ಇಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಶ್ರೀಗಳು ಕೂಡಲೇ ಕ್ಷಮೇ ಕೇಳಬೇಕು. ಇಲ್ಲವಾದರೆ ಲಿಂಗಾಯತ ಭಕ್ತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.