
ಮಹಾಲಿಂಗಪುರ: ‘ಕಾಯಕ ಶ್ರದ್ಧೆ ಹೊಂದಿರುವ ಚನಬಸು ಹುರಕಡ್ಲಿ ಅವರ ಸ್ವಾರ್ಥ ರಹಿತ ಸಾಮಾಜಿಕ ಕಾರ್ಯ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಪಟ್ಟಣದ ಬಸವನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಗೆಳೆಯರ ಬಳಗದಿಂದ ಶನಿವಾರ ಹಮ್ಮಿಕೊಂಡ ಶಿವಾನಂದ ನೇಗಿನಾಳ ಸಂಪಾದನೆಯ ‘ಮಿಡಿದ ಮನಸ್ಸು’ ಚನಬಸು ಹುರಕಡ್ಲಿ ಅವರ ಕುರಿತ ಅಭಿನಂದನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ‘ಜನ ಹಣಕ್ಕೆ ಹೆಚ್ಚು ಗೌರವ ಕೊಡುತ್ತಾರೆಂದು ಕೆಲವರು ಭಾವಿಸಿರುತ್ತಾರೆ. ಆದರೆ, ಹಣಕ್ಕಿಂತ ಗುಣಕ್ಕೆ ಹೆಚ್ಚು ಮಹತ್ವವಿದೆ ಎಂಬುದನ್ನು ಮರೆಯಬಾರದು’ ಎಂದರು.
ವಚನ ಪಿತಾಮಹ ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್‌ನ ಜಮಖಂಡಿ ತಾಲ್ಲೂಕು ಅಧ್ಯಕ್ಷೆ ಭಾಗ್ಯಶ್ರೀ ಕೋಟಿ ಮಾತನಾಡಿದರು. ಚನಬಸು ಹುರಕಡ್ಲಿ ದಂಪತಿಯನ್ನು ಸನ್ಮಾನಿಸಲಾಯಿತು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ, ಕಲಬುರಗಿಯ ಸೋಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮ.ಕೃ.ಮೇಗಾಡಿ ಕೃತಿ ಪರಿಚಯಿಸಿದರು. ಮಲ್ಲೇಶಪ್ಪ ಕಟಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹೇಶ ಕಲ್ಲೇದ, ಲೇಖಕ ಶಿವಾನಂದ ನೇಗಿನಾಳ, ಬಸವರಾಜ ಮೇಟಿ, ವಿ.ಬಿ.ಫಣಸಲಕರ ಇದ್ದರು.
ಮಿಡಿದ ಮನಸ್ಸು ಚನಬಸು ಹುರಕಡ್ಲಿ ಕುರಿತು ಅಭಿನಂದನಾ ಗ್ರಂಥ
ಸಂಪಾದಕ: ಶಿವಾನಂದ ನೇಗಿನಾಳ
ಪ್ರಕಾಶನ: ಸಿಂಹ ಪ್ರಕಾಶನ ಮಹಾಲಿಂಗಪುರ
ಪುಟಗಳು: 176
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.