ADVERTISEMENT

ಹೋಳಿ: ಬಣ್ಣದಾಟದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:04 IST
Last Updated 4 ಮಾರ್ಚ್ 2026, 5:04 IST
ಮಹಾಲಿಂಗಪುರದಲ್ಲಿ ಮಂಗಳವಾರ ನಡೆದ ಹೋಳಿ ಹಬ್ಬದ ಬಣ್ಣದಾಟದಲ್ಲಿ ಮಿಂದೆದ್ದ ಮಹಿಳೆಯರು
ಮಹಾಲಿಂಗಪುರದಲ್ಲಿ ಮಂಗಳವಾರ ನಡೆದ ಹೋಳಿ ಹಬ್ಬದ ಬಣ್ಣದಾಟದಲ್ಲಿ ಮಿಂದೆದ್ದ ಮಹಿಳೆಯರು   

ಮಹಾಲಿಂಗಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಮುಖ ಬಡಾವಣೆಗಳಲ್ಲಿ ಮಕ್ಕಳು, ಯುವಕ-ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಕಾಮದಹನ ಮಾಡಿ ಬೆಳಿಗ್ಗೆ ಕಾಮಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಹಾಡುಗಳಿಗೆ ಹೆಜ್ಜೆ ಹಾಕುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

ನಡುಚೌಕಿಯಲ್ಲಿ ‘ನಡುಚೌಕಿ ರಂಗೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮೀಪದ ರನ್ನಬೆಳಗಲಿಯ ಬಂದಲಕ್ಷ್ಮೀ ದೇವಿ ದೇವಸ್ಥಾನದ ಎದುರು ಸರ್ವಧರ್ಮ ಗೆಳೆಯರ ಬಳಗದಿಂದ ಮೊದಲ ಬಾರಿಗೆ ಹಮ್ಮಿಕೊಂಡ ‘ರನ್ನಬೆಳಗಲಿ ರಂಗೋತ್ಸವ’ದಲ್ಲಿ ಜನರು ಬಣ್ಣ ಎರಚಿ ಕುಣಿದಾಡಿದರು.

ADVERTISEMENT

ಸಮೀಪದ ಚಿಮ್ಮಡ ಗ್ರಾಮದಲ್ಲಿ ಹೋಳಿ ಹಬ್ಬದ ಬಣ್ಣದಾಟ ನಿಷೇಧವಿದ್ದರೂ ಹೋಳಿ ಹಬ್ಬದ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ರೈತರು, ಕಾರ್ಮಿಕರು ಹೊಸ ಬಟ್ಟೆ ತೊಟ್ಟು ಹೋಳಿ ಹಾಡುಗಳನ್ನು ಹಾಡುತ್ತ ರಂಜಿಸಿದರು. ಬೃಹತ್ ಪ್ರಮಾಣದ ಉರುವಲಿಗೆ ಕಿಚ್ಚು ಇಡುವ ಮೂಲಕ ರತಿಕಾಮರ ದಹನ ಕಾರ್ಯಕ್ರಮ ನೆರವೇರಿತು.

ಮಹಾಲಿಂಗಪುರದಲ್ಲಿ ಮಂಗಳವಾರ ಹೋಳಿ ಬಣ್ಣದಾಟದ ಸಂಭ್ರಮದಲ್ಲಿ ಪುರುಷರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.