ಮಹಾಲಿಂಗಪುರ: ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹಾನಿಗೀಡಾದ ಆಯಿಲ್‍ಮಿಲ್ ಪ್ಲಾಟ್‍ನಲ್ಲಿರುವ ನೇಕಾರ ನಾಗಪ್ಪ ಯಾದವಾಡ ಅವರ ಮನೆಗೆ ಶಾಸಕ ಸಿದ್ದು ಸವದಿ ಸೋಮವಾರ ಭೇಟಿ ನೀಡಿ, ವೈಯಕ್ತಿಕವಾಗಿ ₹5 ಸಾವಿರ ನೀಡಿದರು.
ಮಳೆಯಿಂದ ಹಾನಿಗೀಡಾದ ಪತ್ರಾಸ್ ಚಾವಣಿ ಪರಿಶೀಲಿಸಿದ ಶಾಸಕರು, ತಹಶೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಕರೆ ಮಾಡಿ ಹಾನಿ ಕುರಿತು ವರದಿ ತಯಾರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಮುಖಂಡರಾದ ಶಂಕರಗೌಡ ಪಾಟೀಲ, ಶಿವಾನಂದ ಅಂಗಡಿ, ಮಹೇಶ ಜಿಡ್ಡಿಮನಿ, ಶಿವನಗೌಡ ಪಾಟೀಲ, ಹರೀಶ ನಾಯಕ, ರಾಮು ಪಾತ್ರೋಟ, ಚೇತನ ಬಂಡಿವಡ್ಡರ ಇದ್ದರು.
ಅಧಿಕಾರಿ ಭೇಟಿ: ಮಳೆಗೆ ಹಾನಿಗೀಡಾದ ಆಯಿಲ್‍ಮಿಲ್ ಪ್ಲಾಟ್‍ನಲ್ಲಿರುವ ನೇಕಾರ ಬಸವರಾಜ ನಾಗರಾಳ ಅವರ ಮನೆಗೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಚಾರಖಾನೆ ಸೋಮವಾರ ಭೇಟಿ ನೀಡಿದರು.
ಕಚ್ಚಾ ನೂಲು, ಮಗ್ಗ ಹಾಗೂ ಮಗ್ಗದ ಉಪಕರಣಗಳು ಹಾನಿಗೀಡಾಗಿದ್ದನ್ನು ಪರಿಶೀಲಿಸಿ, ‘ಸಂಬಂಧಪಟ್ಟ ಇಲಾಖೆಗೆ ಹಾನಿ ಕುರಿತು ವರದಿ ಸಲ್ಲಿಸಲಾಗುವುದು’ ಎಂದರು.
ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ರಮೇಶ ನಾಗರಾಳ, ಗುರು ನಾಗರಾಳ, ಈರಪ್ಪ ನಾಗರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.