ADVERTISEMENT

ಮಹೀಷವಾಡಗಿ ಸೇತುವೆ ಕಾಮಗಾರಿ ಆರಂಭಿಸಿ: ಲಕ್ಷಣ ಜಂಬಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:14 IST
Last Updated 18 ಡಿಸೆಂಬರ್ 2025, 2:14 IST
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಬೇಕೆಂದು ಅಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಹಾರೂಗೇರಿಯ ಹಿರಿಯ ವೈದ್ಯ ಲಕ್ಷ್ಮಣ ಜಂಬಗಿ ಮಾತನಾಡಿದರು
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಬೇಕೆಂದು ಅಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಹಾರೂಗೇರಿಯ ಹಿರಿಯ ವೈದ್ಯ ಲಕ್ಷ್ಮಣ ಜಂಬಗಿ ಮಾತನಾಡಿದರು   

ರಬಕವಿ ಬನಹಟ್ಟಿ: ಸಮೀಪದ ಕೃಷ್ಣಾ ನದಿ ಮೇಲೆ ನಿರ್ಮಿಸುತ್ತಿರುವ ಮಹೀಷವಾಡಗಿ ಸೇತುವೆ ಕಾಮಗಾರಿ 2021ರಿಂದ ಸ್ಥಗಿತಗೊಂಡಿದ್ದು, ಈ ಭಾಗದ ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದೆ ಇರುವುದರಿಂದ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆದಿದ್ದು, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಕಾಮಗಾರಿ ಆರಂಭಿಸಬೇಕು ಎಂದು ಹಾರೂಗೇರಿಯ ಹಿರಿಯ ವೈದ್ಯ ಲಕ್ಷಣ ಜಂಬಗಿ ಆಗ್ರಹಿಸಿದರು.

ರಬಕವಿಯ ಶಂಕರಲಿಂಗ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ ಡಾ.ರವಿ ಜಮಖಂಡಿ ಆರಂಭಿಸಿರುವು ಉಪವಾಸ ಸತ್ಯಾಗ್ರಹಕ್ಕೆ ವೈದ್ಯರ ಸಂಘ ಬೆಂಬಲವನ್ನು ಸೂಚಿಸಿ ಮಾತನಾಡಿದರು.

ಈ ಸೇತುವೆ ನಿರ್ಮಾಣದಿಂದಾಗಿ ಅಥಣಿ ಮತ್ತು ರಬಕವಿ ಬನಹಟ್ಟಿ ತಾಲ್ಲೂಕಿನ ಮಧ್ಯದಲ್ಲಿ ವ್ಯಾಪಾರ, ವಾಣಿಜ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅಭಿವೃದ್ಧಿಯಾಗಲಿವೆ.  ಈ ಸೇತುವೆ ಎರಡು ತಾಲ್ಲೂಕಿನ ಸಂಪರ್ಕದ ಕೊಂಡಿಯಾಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನ ನೀಡಬೇಕು ಎಂದು ತಿಳಿಸಿದರು.

ADVERTISEMENT

ಬನಹಟ್ಟಿಯ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಭೀಮಶಿ ಮಗದುಮ್ ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಸಂಗ್ರಹಿಸಲಾದ ಮೂವತ್ತು ಟನ್ ನಷ್ಟು ಕಬ್ಬಿಣದ ವಸ್ತುಗಳು, ಮರಳು ಸೇರಿದಂತೆ ಅನೇಕ ವಸ್ತುಗಳು ಕಳ್ಳತನವಾಗಿವೆ. ಈ ಕುರಿತು ತನಿಖೆಯಾಗಬೇಕು. ರಬಕವಿ ಬನಹಟ್ಟಿ ತಾಲ್ಲೂಕಿನ ಜನರು ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಹೋರಾಟ ಮಾಡುವುದು ಅನಿವಾರ್ಯವಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಡಾ.ಸಂಜಯ ಪಾಟೀಲ ಪಾಟೀಲ ಮಾತನಾಡಿದರು.

ವೈದ್ಯರಾದ ವಿನೋದ ಮೇತ್ರಿ, ಅಭಿನಂದನ ಡೋರ್ಲೆ, ಸೋಮಶೇಖರ ಬಡೇಮಿ, ದೀಪಾಲಿ ಬಸವರಾಜ ಡಂಗಿ ಡಾ.ಜಿ.ಎಚ್.ಚಿತ್ತರಗಿ, ಜ್ಯೋತಿ ಜಿ. ಚಿತ್ತರಗಿ, ಮಹಾನಂದ ಹೊರಟ್ಟಿ, ಸಂಜಯ ತೆಗ್ಗಿ, ಮಹಾದೇವ ದೂಪದಾಳ, ಸಂಜಯ ತೇಲಿ, ಸೋಮಶೇಖರ ಕೊಟ್ಟರಶೆಟ್ಟಿ, ಶ್ರೀಶೈಲ ದಲಾಲ, ಉದಯ ಜಿಗಜಿನ್ನಿ, ಗಜಾನನ ವಜ್ರಮಟ್ಟಿ, ನೀಲಕಂಠ ಮುತ್ತೂರು ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.