ADVERTISEMENT

ಬಾಗಲಕೋಟೆ| ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರೈಸಲಿ: ಬಸವ ಧರ್ಮ ಪೀಠಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 2:45 IST
Last Updated 11 ಜನವರಿ 2026, 2:45 IST
ಮಾತೆ ಗಂಗಾದೇವಿ
ಮಾತೆ ಗಂಗಾದೇವಿ   

ಬಾಗಲಕೋಟೆ: ‘ಬಸವಣ್ಣನವರ ತತ್ವಗಳ ಅನುಯಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು. ಅವರು ಬಸವಣ್ಣನವರ ಬಗ್ಗೆ ಅಪಾರ ಭಕ್ತಿ, ನಿಷ್ಠೆ ಮತ್ತು ಶ್ರದ್ಧೆ ಹೊಂದಿದ್ದಾರೆ’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

‘ಮಾಜಿ ಮುಖ್ಯಮಂತ್ರಿ ದೇವರಾಜು ಅರಸರಂತೆಯೇ ಸಿದ್ದರಾಮಯ್ಯ ಅವರೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ನಮಗೆ ಎಲ್ಲರೂ ಒಂದೇ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೂಡ ಒಳ್ಳೆಯವರು. ಆದರೂ, ಬಸವಣ್ಣನ ತತ್ವಗಳ ಅನುಯಾಯಿ ಸಿದ್ದರಾಮಯ್ಯ ಮುಂದುವರೆಯಲಿ ಎಂಬು ನಮ್ಮ ಆಶಯ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT