ADVERTISEMENT

ಬಾದಾಮಿಯಲ್ಲಿ ಕೋತಿಗಳ ನಿಗೂಢ ಸಾವು?

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:57 IST
Last Updated 30 ಅಕ್ಟೋಬರ್ 2025, 2:57 IST
<div class="paragraphs"><p>ಬಾದಾಮಿ ಮೇಣಬಸದಿ ರಸ್ತೆಯಲ್ಲಿ ಕೋತಿಯೊಂದು ಮೃತಪಟ್ಟಿರುವುದು.</p></div>

ಬಾದಾಮಿ ಮೇಣಬಸದಿ ರಸ್ತೆಯಲ್ಲಿ ಕೋತಿಯೊಂದು ಮೃತಪಟ್ಟಿರುವುದು.

   

ಬಾದಾಮಿ: ಪಟ್ಟಣದಲ್ಲಿ ತಿಂಗಳಿಂದ ರಸ್ತೆಯಲ್ಲಿ ಕೋತಿಗಳು ನಿರಂತರವಾಗಿ ನಿಗೂಢವಾಗಿ ಸಾವನ್ನಪ್ಪುತ್ತಿದ್ದು ಜನರು ಆತಂಕಗೊಂಡಿದ್ದಾರೆ.

ಪಟ್ಟಣದಲ್ಲಿ ಮತ್ತು ಬೆಟ್ಟಗಳಲ್ಲಿ ಸಾವಿರಾರು ಬಿಳಿ ಮತ್ತು ಕಪ್ಪುವರ್ಣದ ಕೋತಿಗಳ ಗುಂಪುಗಳು ವಾಸವಾಗಿದೆ. ಬೆಳಿಗ್ಗೆ ಆಹಾರ ಹುಡುಕುತ್ತ ಪಟ್ಟಣದಲ್ಲಿ ಮತ್ತು ಸ್ಮಾರಕಗಳತ್ತ ಬರುತ್ತವೆ. ಬಿಳಿ ಬಣ್ಣದ ಕೋತಿಗಳು ಸಾಯುತ್ತಿವೆ. ಮೇಣಬಸದಿ ರಸ್ತೆಯ ಸಮೀಪ ಬುಧವಾರ ಕೋತಿಯೊಂದು ಮೃತಪಟ್ಟಿದ್ದು ಕಂಡು ಬಂದಿತು.

ADVERTISEMENT

‘ ಅರಣ್ಯ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆ ಸಾವಿನ ತನಿಖೆ ಮಾಡಿ ಪ್ರಾಣಿಗಳ ಜೀವವನ್ನು ಉಳಿಸಬೇಕಿದೆ ’ ಎಂದು ಸಾಮಾಜಿಕ ಕಾರ್ಯಕರ್ತ ಬೇಲೂರಪ್ಪ ವಡ್ಡರ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

‘ ಪಟ್ಟಣದ ಕೋತಿಗಳು ಆರೋಗ್ಯವಾಗಿವೆ. ಇವುಗಳಿಗೆ ಯಾವುದೇ ರೋಗವಿಲ್ಲ. ಕೋತಿಗಳ ಗುಂಪುಗಳು ಒಂದಕ್ಕೊಂದು ಕಚ್ಚಾಡಿ, ವಿಷ ಆಹಾರ ಸೇವಿಸಿ ಇಲ್ಲವೇ ವಿದ್ಯುತ್ ಶಾಕ್ ನಿಂದ ಮೃತಪಟ್ಟಿರಬಹುದು ’ ಎಂದು ಪಶು ಸಂಗೋಪನೆ ಅಲಾಖೆಯ ವೈದ್ಯ ಶ್ರೀಕಾಂತ ಸಬನೀಸ್ ಪ್ರತಿಕ್ರಿಯಿಸಿದರು.

‘ ಸಾರ್ವಜನಿಕರು ಅಸ್ವಸ್ಥಗೊಂಡಿದ್ದ ಎರಡು ಕೋತಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವೈದ್ಯರ ಗಮನಕ್ಕೆ ತರಲಾಗಿದೆ. ಒಂದು ಕೋತಿ ಆರಾಮ ಆಗಿದೆ. ಮತ್ತೆ ಪಶು ಸಂಗೋಪನೆ ಇಲಾಖೆಯ ವೈದ್ಯರ ಗಮನಕ್ಕೆ ತರುವುದಾಗಿ  ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಮರೆನ್ನವರ ಹೇಳಿದರು.

‘ ಸ್ಮಾರಕಗಳ ಸಮೀಪ ಪ್ರವಾಸಿಗರು ಕೋತಿಗಳಿಗೆ ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಡುವುದರಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪಶು ಸಂಗೋಪನೆ ಇಲಾಖೆಯ ವೈದ್ಯರು ಕೋತಿಗಳ ರಕ್ತ ಪರೀಕ್ಷೆಯ ನಂತರ ನಿಖರವಾದ ಕಾರಣ ಗೊತ್ತಾಗಲಿದೆ ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.