ಮುಧೋಳ: ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಮೇ 8 ರಿಂದ ನೀರು ಹರಿಸುವುದಾಗಿ ಆದೇಶ ಮಾಡಿ ಈಗ ನೀರು ಹರಿಸಲು ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ರೈತ ಸಂಘ, ಕಬ್ಬು ಬೆಳಗಾರರ ಸಂಘ ಹಾಗೂ ನದಿ ಪಾತ್ರದ ರೈತರು ಶುಕ್ರವಾರ ತಾಲ್ಲೂಕಿನ ನದಿ ಪಾತ್ರದ ಗ್ರಾಮವಾದ ಚಿಂಚಖಂಡಿ ಗ್ರಾಮದ ವಿಜಯಪುರ– ಬೆಳಗಾವಿ ರಾಜ್ಯ ಹೆದ್ದಾರಿ 34 ಬಂದ್ ಮಾಡಿ ಹೋರಾಟ ಆರಂಭಿಸಿದ್ದಾರೆ.
ಬಸವ ಜಯಂತಿ ಅಂಗವಾಗಿ ಚಿಂಚಖಂಡಿ ಗ್ರಾಮಸ್ತರು ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದು, ಹೋರಾಟಗಾರರು ರಸ್ತೆ ಮೇಲೆ ಕುಳಿತು ಊಟ ಮಾಡಿದರು.
ಪರದಾಟ: ವಿಜಯಪುರ –ಬೆಳಗಾವಿ ರಾಜ್ಯ ಹೆದ್ದಾರಿ 34 ಬಂದ್ ಮಾಡಿರುವುದರಿಂದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಸುಮಾರ 30 ಕಿ.ಮೀ ಸುತ್ತುಬಳಿಸಿ ಪ್ರಯಾಣ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಮುಖಂಡರಾದ ಡುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮುತ್ತಪ್ಪ ಕೊಮ್ಮಾರ, ದುಂಡಪ್ಪ ನೀಲಿ, ಲಕ್ಷ್ಮಣ ಚಿನ್ನನವರ, ಸಿಗುರಪ್ಪ ಅಕ್ಕಮರಡಿ, ದುದ್ರೇಶ ಅಡವಿ, ನಿಂಗಪ್ಪ ಹೊಸಕೋಟಿ, ಬಂಡು ಘಾಟಗೆ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.