ADVERTISEMENT

ಮುರಗೇಶ ನಿರಾಣಿಯವರ 60ನೇ ಹುಟ್ಟು ಹಬ್ಬ: ಕೃಷ್ಣಾ ಪುಣ್ಯ ಸ್ನಾನ, ಆರತಿಗೆ ಸಿದ್ಧತೆ

ಮುರಗೇಶ ನಿರಾಣಿಯವರ 60ನೇ ಹುಟ್ಟು ಹಬ್ಬದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:03 IST
Last Updated 16 ಆಗಸ್ಟ್ 2025, 3:03 IST
<div class="paragraphs"><p>ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಉತ್ತರವಾಹಿನಿಯಾಗಿ ಹರಿದಿರುವ ಕೃಷ್ಣಾ ನದಿಯ ತೀರದಲ್ಲಿ ಕೃಷ್ಣಾ ಆರತಿಗೆ ಸಿದ್ದವಾಗುತ್ತಿರುವ ವೇದಿಕೆ</p></div>

ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಉತ್ತರವಾಹಿನಿಯಾಗಿ ಹರಿದಿರುವ ಕೃಷ್ಣಾ ನದಿಯ ತೀರದಲ್ಲಿ ಕೃಷ್ಣಾ ಆರತಿಗೆ ಸಿದ್ದವಾಗುತ್ತಿರುವ ವೇದಿಕೆ

   

ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಉತ್ತರವಾಹಿನಿಯಾಗಿ ಹರಿದಿರುವ ಕೃಷ್ಣಾ ನದಿಯ ತೀರದಲ್ಲಿ ಎಂ.ಆರ್.ಎನ್ ನಿರಾಣಿ ಫೌಂಡೇಶನ ಹಾಗೂ ರೈತರ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಮುರಗೇಶ ನಿರಾಣಿಯವರ 60ನೇ ಹುಟ್ಟು ಹಬ್ಬದ ನಿಮಿತ್ತ ಆ.16ರಂದು ನಡೆಯುವ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾಆರತಿ, ಕುಂಭಮೇಳ ಮಾದರಿಯಲ್ಲಿ ನಾಗಾ ಸಾಧುಗಳ ಹಾಗೂ ಸಂತ ಮಹಾತ್ಮರ ಸಮ್ಮೀಲನ ಜರುಗಲಿದೆ.

ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಿಂದ ಸಾವಿರಾರು ಜನರು ಪಾಲ್ಗೊಳ್ಳಲಿದ್ದು ಬಂದ ಜನರಿಗೆ ತೆರೆದ ಮಂಟಪದಲ್ಲಿ ಸಾವಿರಾರು ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಹಾಗೂ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ, ವೇದಿಕೆಯಿಂದ ದೂರವಿರುವ ಜನರಿಗೆ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾದ ಆಸನದ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಕೃಷ್ಣಾರತಿ ಮಾಡಲು ಕಾಶಿ ಕ್ಷೇತ್ರದಿಂದ 11 ಜನ ಅರ್ಚಕರ ತಂಡ ಬಂದಿದ್ದು ಹಾಗೂ ಆರತಿ ಮಾಡುವ ಅರ್ಚಕರಿಗೆ ವೇದಿಕೆ ನಿರ್ಮಿಸಲಾಗಿದೆ, ಒಂದು ತಂಡ ನದಿ ತೀರದಲ್ಲಿ ಕೃಷ್ಣಾಆರತಿ ಮಾಡಿದರೆ ಇನ್ನೊಂದು ತಂಡ ಬೋಟ್ ಮೂಲಕ ನದಿಯಲ್ಲಿ ಹೋಗಿ ಕೃಷ್ಣಾಆರತಿ ಮಾಡಲು ಬೋಟ್ ವ್ಯವಸ್ಥೆ ಮಾಡಿದ್ದಾರೆ, ನಂತರ ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆಯಲು ಪ್ರತ್ಯೆಕ ವ್ಯವಸ್ಥೆ ಮಾಡಲಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮೀಸಿರುವ ಹಿಪ್ಪರಗಿ ಬ್ಯಾರೇಜ್ ಗೆ ಬಣ್ಣ ಬಣ್ಣದ ದೀಪಾಲಂಕಾರವನ್ನು ಮಾಡಿದ್ದಾರೆ, ಬೆಳಿಗ್ಗೆಯಿಂದ ವಿವಿಧ ಕ್ಷೇತ್ರಗಳಿಂದ 200ಕ್ಕೂ ಅಧಿಕ ದೇವರ ಪಲ್ಲಕ್ಕಿಗಳು ಆಗಮಿಸಲಿದ್ದು ಪಲ್ಲಕ್ಕಿಗಳು ಒಂದೆಡೆ ಸೇರಲು ವ್ಯವಸ್ಥೆ ಮಾಡಿದ್ದಾರೆ.

ನೂರಕ್ಕೂ ಅಧಿಕ ಜನ ನಾಗಾ ಸಾಧುಗಳು ಆಗಮಿಸಿದ್ದು ಬೆಳಿಗ್ಗೆ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಸಂಚರಿಸಲಿದ್ದು ನಂತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ಹುಕ್ಕೇರಿ ಚಂದ್ರಶೇಖರ ಶ್ರೀಗಳು, ನೀಡಸೋಸಿ ನಿಜಲಿಂಗೇಶ್ವರ ಶ್ರೀಗಳು ಸೇರಿದಂತೆ ವಿಜಯಪೂರ ಬಾಗಲಕೋಟೆ ಹಾಗೂ ಬೆಳಗಾವಿಯಿಂದ ವಿವಿಧ ಮಠಾಧೀಶರು, ಹಾಗೂ ಹಾಲಿ ಸಚಿವರು ಶಾಸಕರು, ಮಾಜಿ ಸಚಿವರು ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.