ಜಂಬಗಿ ಕೆಡಿ ಗ್ರಾಮದಲ್ಲಿ ಹಾಳಾಗಿರುವ ಸಾಮೂಹಿಕ ಶೌಚಾಲಯಗಳು
ಮುಧೋಳ: ತಾಲ್ಲೂಕಿನ ಜಂಬಗಿ ಕೆ.ಡಿ ಜನರು ಹತ್ತಾರು ಸಮಸ್ಯೆಯಿಂದ ಜೀವನ ಸಾಗಿಸುತ್ತಿದ್ದರೂ ಸಮಸ್ಯೆ ಸರಿಪಡಿಸಬೇಕಾದ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸವೇ ಸರಿ.
ಗ್ರಾಮಕ್ಕೆ ಅಗತ್ಯವಿರುವ ಬಸ್ ತಂಗುದಾಣ, ಕುಡಿಯುವ ನೀರು, ಶೌಚಾಲಯ ಬಳಕೆ, ಅಂಗನವಾಡಿ ಕೇಂದ್ರ ಸೇರಿದಂತೆ ಹತ್ತಾರು ಸಮಸ್ಯೆಗಳು ಗ್ರಾಮದಲ್ಲಿ ಇವೆ.
ಗ್ರಾಮಕ್ಕೆ ಬೇಕಿದೆ ಬಸ್ ತಂಗುದಾಣ: ಜಂಬಗಿ ಗ್ರಾಮಕ್ಕೆ ಹಲವಾರು ದಶಕಗಳಿಂದಲೂ ಬಸ್ ತಂಗುದಾಣವೆಂಬುದು ಬಿಸಿಲು ಕುದುರೆಯಂತಾಗಿದೆ. ಗ್ರಾಮದ ಪ್ರಮುಖ ಸ್ಥಳದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಬಸ್ ನಿಲ್ಲುತ್ತದೆಯಾದರೂ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಒಂದು ತಂಗುದಾಣ ನಿರ್ಮಿಸಿಲ್ಲ.
ಖಾಸಗಿ ವಾಹನಗಳೂ ಇದೇ ಅಂಗಳದಿಂದ ಸಾರ್ವಜನಿಕರಿಗೆ ಸೇವೆ ಒದಗಿಸುತ್ತವೆ. ಆದರೆ, ಅವುಗಳಲ್ಲಿ ಸಂಚರಿಸುವ ಜನರು ಮಾತ್ರ ಅಂಗಳದಲ್ಲಿಯೇ ನಿಂತು ಕಾಯಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ದರು ಬಿಸಿಲು, ಮಳೆ, ಚಳಿಯೆನ್ನದೆ ಅಂಗಳದಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ತಂಗುದಾಣ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.
ಬಿಳಿಯಾನೆಯಂತಾದ ಜೆಜೆಎಂ:
ಮನೆ ಮನೆಗೂ ನಿರಂತರ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಂಬಗಿ ಗ್ರಾಮದಲ್ಲಿ ಬಿಳಿಯಾನೆಯಂತಾಗಿದೆ. ಯೋಜನೆಯಡಿ ಗ್ರಾಮದ ಬಹುತೇಕ ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿದ್ದರೂ ನಳದಲ್ಲಿ ನೀರು ಬರುತ್ತಿಲ್ಲ.
ಯೋಜನೆ ಆರಂಭಿಸಿದ ಕೆಲದಿನಗಳ ಕಾಲ ನೀರು ಬರುತ್ತಿತ್ತು. ನಂತರ ನಲ್ಲಿಯಲ್ಲಿ ನೀರು ಅಪರೂಪವಾಗಿದೆ. ಎಂದೋ ಒಮ್ಮೆ ಜೆಜೆಎಂ ನಳದಲ್ಲಿ ಬರುವ ನೀರು ಗ್ರಾಮದಲ್ಲಿ ಯೋಜನೆಯ ಜೀವಂತಿಕೆಯನ್ನು ಸಾರುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಜೋಡಿಸಿರುವ ನಲ್ಲಿಗಳಲ್ಲಿ ನೀರಿಗಿಂತ ಸದ್ದೆ ಹೆಚ್ಚಾಗಿ ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಯೋಜನೆಯ ನಲ್ಲಿಗಳಿಗಿಂತ ಮೊದಲಿದ್ದ ನಲ್ಲಿಗಳಲ್ಲಿಯೇ ನಿಯಮಿತವಾಗಿ ನೀರು ಬರುತ್ತಿರುವುದರಿಂದ ನೀರಿನ ಬವಣೆ ಈ ಗ್ರಾಮವನ್ನು ಬಾಧಿಸುತ್ತಿಲ್ಲ.
ಆರಂಭವಾಗದ ಅಂಗನವಾಡಿ ಕೇಂದ್ರ:
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಿ ಎರಡು ವರ್ಷಗಳು ಕಳೆದಿವೆ. ಆದರೆ ಇದೂವರೆಗೂ ಉದ್ಘಾಟನೆ ಕಾಲ ಕೂಡಿಬಂದಿಲ್ಲ. ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆಗೊಳ್ಳದ ಕಾರಣ ಮಕ್ಕಳು ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಕಲಿಯಬೇಕಾದ ಅನಿವಾರ್ಯತೆ ಇದೆ. ನೂತನ ಕಟ್ಟಡದ ಉದ್ಘಾಟನೆಗೆ ಅಧಿಕಾರಿಗಳನ್ನು ಕೇಳಿದರೆ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ ಅವುಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಉದ್ಘಾಟಿಸುತ್ತೇವೆ ಎಂಬ ಉತ್ತರ ನೀಡುತ್ತಾರೆ.
ಗ್ರಾಮಕ್ಕೆ ನೀರಿನ ಕೊರತೆ ಇಲ್ಲ. ಸಾರ್ವಜನಿಕರು ಸರಿಯಾಗಿ ಜಲಜೀವನ್ ಮಿಷನ್ ಯೋಜನೆಯನ್ನು ಸದ್ಬಳಕೆ ಮಾಡದ ಕಾರಣ ಅಲ್ಲಲ್ಲಿ ಸಮಸ್ಯೆಯಾಗಿದೆ.ರಾಮಣ್ಣ ತಳೇವಾಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ (ಗ್ರಾಮಸ್ಥ)
ಶೌಚಾಲಯ ಬಳಕೆ ಇಲ್ಲ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.