ADVERTISEMENT

ತೊಗರಿಬೆಳೆಗೆ ಕಾಯಿಕೊರಕ ಪೀಡೆ; ಸಂರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 2:59 IST
Last Updated 7 ನವೆಂಬರ್ 2025, 2:59 IST
<div class="paragraphs"><p>ತೊಗರಿಬೆಳೆ</p></div>

ತೊಗರಿಬೆಳೆ

   

ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 53,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದಿದ್ದು, ಕೆಲವು ಕಡೆಗಳಲ್ಲಿ ಕಾಯಿಕೊರಕ (ಹೆಲಿಕೋವರ್ಪಾ) ಹುಳುವಿನ ಬಾಧೆ ಕಂಡು ಬಂದಿದೆ. ತಕ್ಷಣ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಲು ಎಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಹುಳುವಿನ ನಿಯಂತ್ರಣಕ್ಕೆ ಥೈಯೋಡಿಕಾರ್ಬ್, ಪ್ರೋಫೇನೋಫಾಸ್ ಅಥವಾ ಮಿಥೋಮಿಲ್ ಕೀಟನಾಶಕಗಳಿಂದ ಮೊದಲ ಸಿಂಪರಣೆ, ಬೇವಿನ ಕಷಾಯದಿಂದ ಎರಡನೇ, ಹೆಲಿಕೋವರ್ಪಾ ಎನ್‍ಪಿವಿ ನಂಜಾಣುವಿನಿಂದ ಮೂರನೇ ಹಾಗೂ ಬೋಪ್ಲಾನಿಲೈಡ್ ಅಥವಾ ಕ್ಲೋರಾಂಟ್ರಿನಿಲಿಪೋಲ ಕೀಟನಾಶಕಗಳಿಂದ ನಾಲ್ಕನೇ ಸಿಂಪರಣೆ ಮಾಡಲು ಸೂಚಿಸಲಾಗಿದೆ.

ADVERTISEMENT

ಸಸ್ಯ ಸಂರಕ್ಷಣಾ ಔಷಧಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿವೆ. ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.