ADVERTISEMENT

ಶಿಕ್ಷಕರು ಭವಿಷ್ಯದ ನಿರ್ಮಾತೃ: ಆರ್.ಎಸ್. ಆದಾಪುರ

ಇಂಗ್ಲಿಷ್ ಮೇಳ ಸಮಾರಂಭಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:18 IST
Last Updated 12 ಫೆಬ್ರುವರಿ 2026, 6:18 IST
ಬೀಳಗಿ ತಾಲ್ಲೂಕಿನ ನಾಗರಾಳ ಕೆಜಿಎಫ್ ಶಾಲೆಯಲ್ಲಿ ಆಯೋಜಿಸಿದ ಇಂಗ್ಲಿಷ್ ಮೇಳ ಕಾರ್ಯಕ್ರಮದಲ್ಲಿ ಆರ್.ಎಸ್. ಆದಾಪುರ ಹಾಗೂ ಜಗದೀಶ ಖೋತ ಭಾಗವಹಿಸಿದ್ದರು
ಬೀಳಗಿ ತಾಲ್ಲೂಕಿನ ನಾಗರಾಳ ಕೆಜಿಎಫ್ ಶಾಲೆಯಲ್ಲಿ ಆಯೋಜಿಸಿದ ಇಂಗ್ಲಿಷ್ ಮೇಳ ಕಾರ್ಯಕ್ರಮದಲ್ಲಿ ಆರ್.ಎಸ್. ಆದಾಪುರ ಹಾಗೂ ಜಗದೀಶ ಖೋತ ಭಾಗವಹಿಸಿದ್ದರು   

ಬೀಳಗಿ: ‘ಶಿಕ್ಷಕರು ಭವಿಷ್ಯದ ನಿರ್ಮಾತೃಗಳು. ಅವರು ಕೇವಲ ಜ್ಞಾನ ಹಂಚಿದರೆ ಸಾಲದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮಾರ್ಗದರ್ಶಕರು, ಪ್ರೇರಕರು, ಸ್ನೇಹಿತರಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ನಾಗರಾಳ ಕೆ.ಜಿ.ಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ ಇಂಗ್ಲಿಷ್ ಮೇಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಜೊತೆ ಪಾಲಕರು ಕೈಜೋಡಿಸಿದಾಗ ಇಂತಹ ಮೇಳಗಳು ಯಶಸ್ವಿಯಾಗುತ್ತವೆ. ಇಲ್ಲಿನ ಪಾಲಕರ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ’ ಎಂದರು.

ADVERTISEMENT

ಶಿಕ್ಷಕ ಆರ್.ಎಚ್. ಜುಂಜೂರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಯೋಜಕ ಜಗದೀಶ ಖೋತ, ಸಿ.ಆರ್.ಪಿ ವಿ.ಎಚ್. ಕುರಿವರ, ಪ್ರಭಾರ ಮುಖ್ಯ ಶಿಕ್ಷಕ ಹನಮಂತಪ್ಪ, ಶಿಕ್ಷಕರಾದ ಎಲ್.ಎನ್.ಮರನೂರ, ಜಿ.ಎ.ನಾಯಿಕ, ಎಲ್.ಎಮ್.ಅಹಿರಸಂಗ, ವಿದ್ಯಾ, ರೇಷ್ಮಾ ತೇರದಾಳ, ಸಿ.ಎನ್.ಉಪ್ಪಲದಿನ್ನಿ ಇದ್ದರು.

ಪಾಲಕರ ಸಮಿತಿಯ ಅಧ್ಯಕ್ಷೆ ಮಾಹಾದೇವಿ ಕೆಂಗಲಗುತ್ತಿ, ಸದಸ್ಯರಾದ ಈರಯ್ಯ ಜಡಿಮಠ, ಮಾಹಾಂತೇಶ ಸೋಮನಕಟ್ಟಿ, ಉಮೇಶ ಹಳ್ಳಿ, ಪಡಿಯಪ್ಪ ಬಡಿಗೇರ, ಮಂಜುನಾಥ ಕರಿಗಾರ, ಕಾಶೀನಾಥ ಕರಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.