ಪ್ರಾತಿನಿಧಿಕ ಚಿತ್ರ
ಬಾಗಲಕೋಟೆ: ಪಂಕಾ ಮಸೀದಿ ಬಳಿಯ ಕಟೌಟ್‌ನಲ್ಲಿ ಹಮಾಸ್ ಮುಖಂಡರ ಭಾವಚಿತ್ರ ಹಾಕಲಾಗಿದೆ. ಅವರ ಭುಜದ ಮೇಲೆ ಪ್ಯಾಲಿಸ್ಟೀನ್ ಧ್ವಜ ಹಾಕಲಾಗಿತ್ತು. ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆ ಮನವಿ ಮಾಡಿದರು.
ಭಾವಚಿತ್ರ ಹಾಕಿರುವುದನ್ನು ಕೆಲವರು ಸ್ಟೇಟಸ್ ಕೂಡ ಹಾಕಿದ್ದಾರೆ ಎಂದು ಆರೋಪಿಸಿದ ಮುಖಂಡ ಗಿರೀಶ ಭಾಂಡಗೆ, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದ ಮೇಲೆ ಹಮಾಸ್ ಮುಖಂಡರ ಭುಜದ ಮೇಲಿದ್ದ ಧ್ವಜದ ಮೇಲೆ ಹಸಿರು ಪಟ್ಟಿ ಹಾಕಿ ಮರೆ ಮಾಚಲಾಗಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಾಗಲಕೋಟೆ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಆಗ್ರಹಿಸಿದರು.
ಚಂದ್ರು ರಾಮವಾಡಗಿ, ಪ್ರಕಾಶ ನಿರಂಜನ, ಗುರುರಾಜ ಶೆಟ್ಟರ್, ಮನೋಜ ಕರಡಿವಾಲ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.