ಪೇಜಾವರ ಶ್ರೀ
ಮುಧೋಳ: ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸಂಚಾಲಕ ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ ತಿಳಿಸಿದ್ದಾರೆ.
20 ರಂದು ಸಂಜೆ 5 ಗಂಟೆಗೆ ನಗರದ ವೆಂಕಟೇಶ ದೇವಸ್ಥಾನದಿಂದ ರಾಘವೇಂದ್ರಸ್ವಾಮಿ ಮಠದ ವರೆಗೆ ವೇದಘೋಷಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀಗಳ ಅಭಿನಂದನಾ ಸಮಾರಂಭ, 8.30ಕ್ಕೆ ರವಿ ಕುಲಕರ್ಣಿ ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.
21ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ ನಡೆಯಲಿದೆ. 11 ರಿಂದ 1ರ ವರೆಗೆ ಸುಬ್ಬಣ್ಣಾಚಾರ್ಯ ಮನಗೂಳಿ ಅವರ ಮನೆಯಲ್ಲಿ ಸಂಸ್ಥಾನದ ಮಹಾಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ಉಪನ್ಯಾಸ, ರಾತ್ರಿ 9 ಗಂಟೆಗೆ ಆನಂದ ಕುಲಕರ್ಣಿ (ಜೇರೆ) ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.
22ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ, 11 ರಿಂದ 1ರ ವರೆಗೆ ರಾಘವೇಂದ್ರಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ನಡೆಯಲಿದೆ.ಮಾಹಿತಿಗಾಗಿ ಋಷಿಕೇಷಾಚಾರ್ಯ ಜೋಷಿ ಮೋ- 7975773474, ಆನಂದ ಕುಲಕರ್ಣಿ 9448017275 ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.