ADVERTISEMENT

ಬೀಳಗಿ: ಬನಶಂಕರಿಗೆ ಭಕ್ತರಿಂದ ಪಾದಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:24 IST
Last Updated 11 ಜನವರಿ 2025, 14:24 IST
ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದ ಭಕ್ತರು ಶನಿವಾರ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದರು
ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದ ಭಕ್ತರು ಶನಿವಾರ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದರು   

ಬೀಳಗಿ: ಪ್ರತಿವರ್ಷದಂತೆ ಈ ವರ್ಷವೂ ತಾಲ್ಲೂಕಿನ ನಾಗರಾಳ ಗ್ರಾಮದ ಬನಶಂಕರಿ ದೇವಸ್ಥಾನದಿಂದ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಶನಿವಾರ ಸುಮಾರು 80 ಜನ ಭಕ್ತರು ಪಾದಯಾತ್ರೆ ಬೆಳೆಸಿದರು.

ಕಪ್ಪರಪಡಿಯಮ್ಮ ನೇಕಾರರ ಸಹಕಾರ ಸಂಘದ ನಿರ್ದೇಶಕ ಮಹಾದೇವ ಗೋಕಾವಿ ಪಾದಯಾತ್ರೆಗೆ ಚಾಲನೆ ನೀಡಿ, ‘ಎಷ್ಟೇ ಸ್ಥಿತಿವಂತರಿದ್ದರೂ ಕೂಡ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂದು ಭಾರತೀಯ ಸಂಪ್ರದಾಯ ಹೇಳುತ್ತದೆ. ನಾಗರಾಳ ದಿಂದ ನೂರಾರು ಭಕ್ತರು ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದು ಅವರ ಯಾತ್ರೆ ಯಶಸ್ವಿ ಆಗಲಿ’ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಬಸವರಾಜ ಕೊಪ್ಪಳ ಮಾತನಾಡಿದರು. 6 ವರ್ಷದ ಮಗುವಿನಿಂದ ಹಿಡಿದು 70 ವರ್ಷದ ವಯೋವೃದ್ದರು, ಮಹಿಳೆಯರು, ಯುವಕ,ಯುವತಿಯರು ಬಾದಾಮಿ ಬನಶಂಕರಿ ನಿನ್ನ ಪಾದಕ ಶಂಭುಕೊ ಎಂದು ಜೈಕಾರ ಹಾಕುತ್ತ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರಾರ್ಥಿಗಳಿಗೆ ಸ್ಥಳೀಯ ಯಶ್ವಿ ಮೆಡಿಕಲ್ಸ್‌ನಿಂದ  ಉಚಿತವಾಗಿ ಔಷಧಗಳನ್ನು ನೀಡಿದರು.

ADVERTISEMENT

ಧರ್ಮಣ್ಣ ಮಂಗಳೂರ,ಕೂಡ್ಲೆಪ್ಪ ಇಂಜಿಗನೇರಿ,ಕುಬೇರ ಯಲಗೊಡ,ಶಂಕರ ಬೆಣ್ಣೂರ,ಶ್ರೀಶೈಲ ಸೋಮನಕಟ್ಟಿ,ಪ್ರಕಾಶ ಯಲಗೊಡ, ಅರುಣ ಕಂಠಿ,ರವಿ ಸೋಮನಕಟ್ಟಿ, ಈರಣ್ಣ ಮಂಗಳೂರ,ತುಕಾರಾಮ ಕೊಲಾರ, ಮಾನಿಂಗಪ್ಪ ಗೋಕಾವಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.