
ರಬಕವಿ ಬನಹಟ್ಟಿ: ಇಲ್ಲಿನ ಅಶೋಕ ನಗರದ ಕಾಲೊನಿಯಲ್ಲಿರುವ ಮಾವಾ ತಯಾರಿಸುವ ಘಟಕದ ಮೇಲೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಶಾಂತಾ ಹಳ್ಳಿ ಮತ್ತು ಸಿಬ್ಬಂದಿ ವರ್ಗದವರು ದಾಳಿ ನಡೆಸಿ ಮಾವಾ ತಯಾರಿಸುವ ವಸ್ತುಗಳು, 3,600 ಮಾವಾ ಪಾಕೀಟ್ ಗಳನ್ನು, ಎರಡು ಮಿಶ್ರಣದ ಯಂತ್ರಗಳನ್ನು ಸೇರಿದಂತೆ ಒಟ್ಟು ₹1.74 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಬನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಮುಸ್ತಾಕ್ ಮಾಲದಾರ ಮನೆಯಲ್ಲಿ ಮುಸ್ತಾಕ ಮಾಲದಾರ ಮತ್ತು ಇಸಾ ಮಾಲದಾರ ಮಾವಾ ತಯಾರಿಸುತ್ತಿದ್ದಾರೆ ಎಂದು ಖಚಿತ ಮಾಹಿತಿಯನ್ನು ಪಡೆದುಕೊಂಡ ದಾಳಿ ನಡೆಸಲಾಯಿತು.
ಘಟನೆಯ ಸಂಬಂಧಪಟ್ಟಂತೆ ಆರೋಪಿ ಬನಹಟ್ಟಿಯ ಸಲ್ಮಾ ಇಮಾಮಸಾಹೇಬ್ ಪೆಂಡಾರಿ ಅವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಕೋಟ್ಪಾ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್ಐ ಶಾಂತಾ ಹಳ್ಳಿ ತನಿಖೆ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾಂತ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಜಮಖಂಡಿ ಡಿವೈಎಸ್ಪಿ ರೋಷನ್ ಜಮೀರ ಮತ್ತು ಸ್ಥಳೀಯ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಪಿಎಸ್ಐ ಶಾಂತಾ ಹಳ್ಳಿ ದಾಳಿ ನಡೆಸಿದ್ದರು.
ಆರ್.ಬಿ. ಪೂಜಾರಿ, ಎಂ.ಆರ್.ಕೆಂಚನ್ನವರ, ಎಸ್.ಐ.ಬಳವಾಡ, ಎಚ್.ಜಿ.ಲಗಳಿ, ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಅಪ್ಪಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.