ADVERTISEMENT

ಸಿದ್ದರಾಮಯ್ಯ ಬೇಗನೆ ಗುಣಮುಖರಾಗಲು ಪ್ರಾರ್ಥಿಸಿ ಬನಶಂಕರಿ ದೇವಿಗೆ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 8:43 IST
Last Updated 4 ಆಗಸ್ಟ್ 2020, 8:43 IST
 ಬಾದಾಮಿ ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಅಭಿಮಾನಿಗಳು ಸೇರಿ ಮಂಗಳವಾರ ಬನಶಂಕರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಾದಾಮಿ ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಅಭಿಮಾನಿಗಳು ಸೇರಿ ಮಂಗಳವಾರ ಬನಶಂಕರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.    

ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಶಾಸಕ ಸಿದ್ಧರಾಮಯ್ಯ ಅವರಿಗೆ ಕೋವಿಡ್ ದೃಢಪಟ್ಟಿರುವ ಕಾರಣ ಅವರು ಬೇಗನೇ ಗುಣವಾಗುವಂತೆ ಪ್ರಾರ್ಥಿಸಿ ಬಾದಾಮಿ ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಅಭಿಮಾನಿಗಳು ಸೇರಿ ಮಂಗಳವಾರ ಬನಶಂಕರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಬನಶಂಕರಿ ದೇವಿಗೆ ಅಭಿಷೇಕ ಮಾಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹೊಳಬಸು ಷ,ಶೆಟ್ಟರ, ಪಿ.ಆರ್.ಗೌಡರ,ಮಲ್ಲಣ್ಣ ಯಲಿಗಾರ,ರಾಜು ಚಿಮ್ಮನಕಟ್ಟಿ,ಮಹೇಶ ಹೊಸಗೌಡರ, ರಾಜಮಹ್ಮದ ಬಾಗವಾನ,ಎಮ್.ಎಚ್.ಛಲವಾದಿ,ರೇವಣಸಿದ್ದಪ್ಪ ನೋಟಗಾರ, ಹನಮಂತ ಅಪ್ಪಣ್ಣವರ, ಶಿವು ಮಣ್ಣೂರ ನಾಗಪ್ಪ ಅಡಪಟ್ಟಿ, ಶ್ರೀಕಾಂತಗೌಡ ಗೌಡರ, ವೆಂಕಣ್ಣ ಹೋರಕೇರಿ, ಶೊರಪ್ಪ ಕೊಪನ್ನವರ ,ಮುತ್ತಣ್ಣ ಗಾಜಿ, ಶಿವಾನಂದ ಚೊಳನ್ನವರ, ಶರಣಪ್ಪ ತಮಿನಾಳ,ಕಾಮಣ್ಣ ಪೂಜಾರ,ಪ್ರಕಾಶ ದೇಸಾಯಿ, ಬಾಪುಗೌಡ ಪಾಟೀಲ,ಕೆ.ಬಿ.ಗೌಡರ,ಶಿವಾನಂದ ದ್ಯಾಮಣ್ಣವರ, ವಾಸು ಬಾವಿ ಮತ್ತಿತರರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.