ADVERTISEMENT

ಎಚ್‌ಐವಿ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ: ಡಾ.ಎಸ್.ಎಸ್.ಅಂಗಡಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 15:58 IST
Last Updated 1 ಡಿಸೆಂಬರ್ 2023, 15:58 IST
ಹುನಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್‌ ದಿನಚಾರಣೆ ಕಾರ್ಯಕ್ರಮವನ್ನು ಡಾ.ಎಸ್.ಎಸ್.ಅಂಗಡಿ ಉದ್ಘಾಟಿಸಿದರು
ಹುನಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್‌ ದಿನಚಾರಣೆ ಕಾರ್ಯಕ್ರಮವನ್ನು ಡಾ.ಎಸ್.ಎಸ್.ಅಂಗಡಿ ಉದ್ಘಾಟಿಸಿದರು   

ಹುನಗುಂದ: ‘ಇತ್ತೀಚಿನ ವರ್ಷಗಳಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ, ಆದರೂ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸುವುದು ಅವಶ್ಯ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಅಂಗಡಿ ಹೇಳಿದರು.

ರಾಜ್ಯ ಏಡ್ಸ್‌ ತಡೆಗಟ್ಟುವ ಸಂಘ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ರೆಡ್ ರಿಬ್ಬನ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್‌ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುರೇಶ ಎಚ್.ಎಸ್ ಮಾತನಾಡಿ, ‘ಹದಿಹರಯದ ವಿದ್ಯಾರ್ಥಿಗಳಲ್ಲಿ ದೈಹಿಕವಾಗಿ ಹಲವು ಬದಲಾವಣೆ ಕಾಣಬಹುದು. ಈ ಸಮಯದಲ್ಲಿ ಮನಸ್ಸು ನಮ್ಮ ನಿಯಂತ್ರಣದಲ್ಲಿರಬೇಕು. ಆಕರ್ಷಣೆಗೆ ಒಳಗಾಗಿ ದಾರಿ ತಪ್ಪಿದರೆ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಎಲ್ಲರೂ ಸೇರಿಕೊಂಡು ಏಡ್ಸ್‌ ನಿಯಂತ್ರಣಕ್ಕೆ ಶ್ರಮಿಸೋಣ’ ಎಂದರು.

ADVERTISEMENT

ಇಳಕಲ್‌ನ ಚಿಕ್ಕಮಕ್ಕಳ ತಜ್ಞೆ ಡಾ.ಸುಜಾತ ಪಾಟೀಲ ಉಪನ್ಯಾಸ ನೀಡಿ, ‘ಜಾಗತಿಕವಾಗಿ ಏಡ್ಸ್‌ ಎಂಬ ಮಹಾಮಾರಿಗೆ ಈವರೆಗೆ 20 ಮಿಲಿಯನ್ ಜನ  ಮೃತಪಟ್ಟಿದ್ದಾರೆ’ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಮುಂಜುನಾಥ ಅಂಕೊಲೇಕರ್ ಹಾಗೂ ಡಾ. ಭರತ್ ಕುಮಾರ ಮಾತನಾಡಿದರು.

ಪ್ರಾಧ್ಯಪಕರಾದ ಬಿ.ವೈ.ಆಲೂರು, ಮಹೇಶ, ಗುಲಾಂ ಸಮದಾನಿ ಆರೋಗ್ಯ ಇಲಾಖೆಯ ಪ್ರವೀಣ ಚೂರಿ ಹಾಗೂ ಸಿಬ್ಬಂದಿ ಇದ್ದರು.

ಹುನಗುಂದನಲ್ಲಿ ವಿಶ್ವ ಏಡ್ಸ್‌ ದಿನಚಾರಣೆ ಅಂಗವಾಗಿ ತಾಲ್ಲೂಕು ಮಟ್ಟದ ಜನ ಜಾಗೃತಿ ಜಾಥಾ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.