ADVERTISEMENT

ಪಿಯು ಫಲಿತಾಂಶ: ಮೇಸ್ತ್ರಿ ಮಗಳು ಸನಾ ಪಕಾಲಿ ಕಾಲೇಜಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 13:35 IST
Last Updated 9 ಏಪ್ರಿಲ್ 2025, 13:35 IST
<div class="paragraphs"><p>ಸನಾ ಪಕಾಲಿ&nbsp;</p></div>

ಸನಾ ಪಕಾಲಿ 

   

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದ ಸನಾ ಪಕಾಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ 95.16 ಅಂಕ ಪಡೆಯುವ ಮೂಲಕ ಬನಹಟ್ಟಿಯ ಎಸ್‍ಆರ್‌ಎ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ತಂದೆ ಅಬ್ದುಲ್‍ಮುನಾಫ ಪಕಾಲಿ ಟ್ರ್ಯಾಕ್ಟರ್ ಗ್ಯಾರೇಜಿನಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸನಾ ಅರ್ಥಶಾಸ್ತ್ರದಲ್ಲಿ 94, ವ್ಯವಹಾರ ಅಧ್ಯಯನದಲ್ಲಿ 100, ರಾಜ್ಯಶಾಸ್ತ್ರದಲ್ಲಿ 95, ಲೆಕ್ಕಶಾಸ್ತ್ರದಲ್ಲಿ 97, ಇಂಗ್ಲೀಷ್‍ನಲ್ಲಿ 91, ಹಿಂದಿಯಲ್ಲಿ 94 ಅಂಕ ಪಡೆದುಕೊಂಡಿದ್ದಾಳೆ. ಸಿ.ಎ ಆಗುವ ಕನಸು ಹೊಂದಿರುವ ಸನಾ, ಎನ್‍ಎಂಎಂಎಸ್ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದುವ ಮೂಲಕ ವಿಶೇಷ ವಿದ್ಯಾರ್ಥಿವೇತನ ಪಡೆದುಕೊಂಡಿದ್ದಾಳೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.