ADVERTISEMENT

ಇಳಕಲ್: ಒಂದೇ ದಿನ 24 ಜನರಿಗೆ ಕಚ್ವಿದ ನಾಯಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:15 IST
Last Updated 5 ನವೆಂಬರ್ 2025, 4:15 IST
ಇಳಕಲ್‌ನಲ್ಲಿ ಸೋಮವಾರ ಹುಚ್ಚು ನಾಯಿ ಕಡಿತದಿಂದ ಗಾಯಗೊಂಡ ಮಗು
ಇಳಕಲ್‌ನಲ್ಲಿ ಸೋಮವಾರ ಹುಚ್ಚು ನಾಯಿ ಕಡಿತದಿಂದ ಗಾಯಗೊಂಡ ಮಗು   

ಇಳಕಲ್: ನಗರದಲ್ಲಿ ಸೋಮವಾರ 24 ಜನರಿಗೆ ಕಚ್ಚಿ ಭಯ ಹುಟ್ಟಿಸಿದ್ದ ಹುಚ್ಚು ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಹುಚ್ಚು ನಾಯಿ ಜನರನ್ನು ಕಚ್ಚಿ ಭೀತಿ ಮೂಡಿಸಿತ್ತು. ಗೌಳೆರಗುಡಿಯಲ್ಲಿ ಮಕ್ಕಳು, ಮಹಿಳೆಯರಿಗೆ, ಅಗ್ನಿಶಾಮಕ ಠಾಣೆಯ ವಸತಿ ಗೃಹಗಳ ನಿವಾಸಿಗಳಿಗೆ, ನಗರದ ಹೊರವಲಯದ ಹೊಟೇಲ್‌ವೊಂದರ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಕಚ್ಚಿ ಗಾಯಗೊಳಿಸಿದೆ.

ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಿದ ಹುಚ್ಚನಾಯಿ ಒಟ್ಟು 24 ಜನರಿಗೆ ಕಚ್ಚಿದೆ. 19 ಜನರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ತೀವ್ರ ಗಾಯಗೊಂಡಿದ್ದ ಐವರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಹುಚ್ಚು ನಾಯಿ ನಗರದ ವಿವಿಧೆಡೆ ಕಚ್ಚಿದ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಹರಡುತ್ತಿದ್ದಂತೆ ಜನ ಭಯಗೊಂಡಿದ್ದರು. ನಗರಸಭೆ ಸಿಬ್ಭಂದಿ ವ್ಯಾಪಕ ಹುಡುಕಾಟ ನಡೆಸಿದರು. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ನೀಡಿದ ಮಾಹಿತಿ ಮೇರೆಗೆ, ಬಲೆ ಬಳಸಿ ಹುಚ್ಚು ಹಿಡಿದ ನಾಯಿಯನ್ನು ಸೆರೆ ಹಿಡಿದರು. ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.