ADVERTISEMENT

ಬನಶಂಕರಿ ಜಾತ್ರೆ ಸಂಭ್ರಮ: ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:31 IST
Last Updated 2 ಫೆಬ್ರುವರಿ 2026, 7:31 IST
ಬನಹಟ್ಟಿಯಲ್ಲಿ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ದೇವಿಯ ಮೂರ್ತಿ ಮೆರವಣಿಗೆ ನಡೆಯಿತು
ಬನಹಟ್ಟಿಯಲ್ಲಿ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ದೇವಿಯ ಮೂರ್ತಿ ಮೆರವಣಿಗೆ ನಡೆಯಿತು   

ರಬಕವಿ ಬನಹಟ್ಟಿ: ನಗರದಲ್ಲಿ ಭಾನುವಾರ ಭಾರತ ಹುಣ್ಣಿಮೆಯ ದಿನದಂದು ಹಳೇ ನೀರಿನ ಟ್ಯಾಂಕ್ ಹತ್ತಿರದ ಬನಶಂಕರಿ ದೇವಿಯ ಜಾತ್ರೆ ಅಂಗವಾಗಿ ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ ಮತ್ತು ಕಳಸೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಂತರ ಚಂಡಿಕಾ ಹೋಮ ನೆರವೇರಿಸಲಾಯಿತು.

ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಿತು. ನೂರಾರು ಮಹಿಳೆಯರು ಆರತಿ ಮತ್ತು ಕುಂಭವನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ದೇವಸ್ಥಾದಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ಶ್ರೀಶೈಲ ಗೊಂಬಿ, ರಾಜು ಶೀಲವಂತ, ಮಹಾಂತೇಶ ಕೊಕಟನೂರ, ಬಸವರಾಜ ನುಚ್ಚಿ, ಶ್ರೀಶೈಲ ಅಥಣಿ, ಕಾಡಪ್ಪ ಪಾಟೀಲ, ಈರಪ್ಪ ಮನವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.