ADVERTISEMENT

ರಬಕವಿ: ಗಮನ ಸೆಳೆಯುವ ಮಣ್ಣಿನ ತರಹೇವಾರಿ ಹಣತೆ

ವಿಶ್ವಜ ಕಾಡದೇವರ
Published 15 ಅಕ್ಟೋಬರ್ 2025, 5:15 IST
Last Updated 15 ಅಕ್ಟೋಬರ್ 2025, 5:15 IST
<div class="paragraphs"><p>ರಬಕವಿ ನಗರದ ಮಹಾಲಿಂಗಪುರ ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಣ್ಣಿನ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಲಾಗುತ್ತಿದೆ.</p></div>

ರಬಕವಿ ನಗರದ ಮಹಾಲಿಂಗಪುರ ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಣ್ಣಿನ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಲಾಗುತ್ತಿದೆ.

   

ರಬಕವಿ ಬನಹಟ್ಟಿ: ರಬಕವಿ ನಗರದ ಹೊರ ವಲಯದ ಮಹಾಲಿಂಗಪುರ ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ತರಹೇವಾರಿ ಮಣ್ಣಿನ ಹಣತೆಗಳು, ಆಕಾಶ ಬುಟ್ಟಿಗಳು ಗಮನ ಸೆಳೆಯುತ್ತಿವೆ.

ಮಣ್ಣಿನ ಆಕಾಶ ಬುಟ್ಟಿಗಳು ಗಡಿಗೆಯ ರೂಪದಲ್ಲಿದ್ದು ಅವುಗಳ ವಿನ್ಯಾಸ ಆಕರ್ಷಕ ಎನಿಸುತ್ತಿದೆ. ₹ 500 ರಿಂದ ₹ 600 ದರವಿದೆ. ತರಹೇವಾರಿ ಹಣತೆಗಳು ಕೂಡ ಇದ್ದು ದರ ₹ 5ರಿಂದ ಆರಂಭಿಸಿ ₹ 300ರವರೆಗೂ ಇದೆ.

ADVERTISEMENT

ಗಣೇಶ ವಿಗ್ರಹದ ಹಣತೆ, ಬಾತುಕೋಳಿ ಹಣತೆ, ಐದು ಹಣತೆಗಳ ಜೋಡಣೆ, ಮಣ್ಣಿನ ಆರತಿಗಳು, ತೂಗಿ ಬಿಡುವ ಹಣತೆಗಳು ಸೇರಿದಂತೆ ಹಲವು ರೀತಿಯ ದೀಪಗಳನ್ನು ಮಾರಾಟ ಮಾಡಲಾಗುತ್ತಿದೆ.

‘ಈ ದೀಪಗಳನ್ನು ಬೆಳಗಾವಿಯಲ್ಲಿ ತಯಾರು ಮಾಡಿಸುತ್ತಿದ್ದೇವೆ. ಬೈಲಹೊಂಗಲದ ಹತ್ತಿರದ ಮುರಗೋಡದಿಂದ ಮಣ್ಣನ್ನು ತರಿಸಲಾಗುತ್ತದೆ. ತಿಗರಿಯ ಮೇಲೆ ದೀಪಗಳನ್ನು ತಯಾರು ಮಾಡಿದ ನಂತರ ಅವುಗಳನ್ನು ಸುಡಲಾಗುತ್ತದೆ. ದೀಪಗಳನ್ನು ವ್ಯವಸ್ಥಿತವಾಗಿ ಸುಟ್ಟಾಗ ಅವು ಕೆಂಪು ಬಣ್ಣಕ್ಕೆ ಬರುತ್ತವೆ. ಇಲ್ಲಿ ಅವುಗಳನ್ನು ಸುಡುವುದು ಮುಖ್ಯ. ನಂತರ ದೀಪಗಳಲ್ಲಿರುವ ಗಣೇಶ, ಸರಸ್ವತಿ ವಿಗ್ರಹಗಳನ್ನು ಮನೆಯಲ್ಲಿ ಕೈಯಿಂದ ಮಾಡಿ ಅಂಟಿಸಲಾಗುತ್ತದೆ. ಕೆಲವು ದೀಪಗಳಿಗೆ ನೈಸರ್ಗಿಕ ಕಾವಿ ಬಣ್ಣವನ್ನು ಕೂಡ ನೀಡಲಾಗುತ್ತದೆ’ ಎಂದು ಮಾಲೀಕರಾದ ಪ್ರಕಾಶ ಕುಂಬಾರ ತಿಳಿಸಿದರು.

‘ಇಲ್ಲಿ ಮಾರಾಟ ಮಾಡುತ್ತಿರುವ ಹಣತೆಗಳು ಕುಂಬಾರರು ಮಾಡಿದ ಹಣತೆಗಳು. ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ದೀಪಗಳಿಗಿಂತ ಇವು ಸುಂದರವಾಗಿದ್ದು, ಸಂಪ್ರದಾಯಬದ್ಧವಾಗಿವೆ. ದೀಪಾವಳಿ ಹಬ್ಬಕ್ಕೆ ಅತ್ಯಂತ ಯೋಗ್ಯವಾಗಿವೆ’ ಎಂದು ಅವರು ತಿಳಿಸಿದರು.

ರಬಕವಿ–ಮಹಾಲಿಂಗಪುರ ರಾಜ್ಯ ಹೆದ್ದಾರಿಯ ಮೂಲಕ ಬೇರೆ ಊರುಗಳಿಗೆ ಹೋಗುವ ಜನರು ಈ ದೀಪಗಳನ್ನು ನೋಡಿ  ಖರೀದಿಸುತ್ತಿದ್ದಾರೆ. ಈ ಭಾಗದಲ್ಲಿ ಇಂಥ ದೀಪಗಳು ದೊರೆಯುತ್ತಿರುವುದು ವಿಶೇಷವಾಗಿದೆ.

ರಬಕವಿ ನಗರದ ಮಹಾಲಿಂಗಪುರ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ತರಹೇವಾರಿ ಮಣ್ಣಿನ ಹಣತೆಗಳು
ರಬಕವಿ ನಗರದ ಮಹಾಲಿಂಗಪುರ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ಗಣೇಶ ಮೂರ್ತಿಯನ್ನು ಹೊಂದಿದ ಮಣ್ಣಿನ ಹಣತೆಗಳು
ಬಾತುಕೋಳಿ ದೀಪಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.