ADVERTISEMENT

ಅಥ್ಲೆಟಿಕ್: ರಾಧಿಕಾ ಪೂಜಾರಿಗೆ ಮೂರು ಬಂಗಾರ ಪದಕ

ಸಂಗಮೇಶ ಹಳ್ಳಿ, ಅಶ್ವಿನಿ ನರಸನ್ನವರ, ಯುವರಾಜ ಲಮಾಣಿ, ವಾಣಿಶ್ರೀ ನಾವಿ ಡಬಲ್ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 3:05 IST
Last Updated 11 ನವೆಂಬರ್ 2025, 3:05 IST
ರಾಧಿಕಾ ಪೂಜಾರಿ
ರಾಧಿಕಾ ಪೂಜಾರಿ   

ರಬಕವಿ ಬನಹಟ್ಟಿ: ಬನಹಟ್ಟಿಯ ಎಸ್‌ಟಿಸಿ ಕಾಲೇಜಿನ ಆಶ‍್ರಯದಲ್ಲಿ ನಡೆಯುತ್ತಿರುವ ಬಾಗಲಕೋಟ ವಿಶ್ವವಿದ್ಯಾಲಯದ ಪ್ರಥಮ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎಸ್‌ಟಿಸಿ ಕಾಲೇಜಿನ ರಾಧಿಕಾ ಪೂಜಾರಿ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಐದು ಮತ್ತು ಹತ್ತು ಸಾವಿರ ಮೀಟರ್ ಓಟದ ಸ್ಪರ್ಧೆ, 4*400 ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಗಲಕೋಟೆಯ ಬಿಪಿಎಡ್ ಕಾಲೇಜಿನ ಸಂಗಮೇಶ ಹಳ್ಳಿ ಐದು ಮತ್ತು ಹತ್ತು ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರ, ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಶ್ವಿನಿ ನರಸನ್ನವರ ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಡಬಲ್ ಬಂಗಾರದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪುರುಷರ ವಿಭಾಗ:

ADVERTISEMENT

ಗುಂಡು ಎಸೆತ: ವಿನಾಯಕ ಗೌಂಡಿ(1), ಅನಿಲ ಯರಗಟ್ಟಿ(2), ಅಭಿಷೇಕ ಯು.ವೈ.(3) ಭಲ್ಲೆ ಎಸೆತ: ಯುವರಾಜ ಲಮಾಣಿ(1), ಸುನೀಲ ಢಪಳಾಪುರ(2), ಮಂಜುನಾ ಪೂಜಾರಿ(3). ಚಕ್ರ ಎಸೆತ: ಯುವರಾಜ ಲಮಾಣಿ(1), ಶ್ರೀಧರ ರಂಗನ್ನವರ(2), ಪ್ರಜ್ವಲ ಸವದಿ(3)

ಉದ್ದ ಜಿಗಿತ: ಇರ್ಫಾನ್ ಅಹಮದ್(1), ವಿನೋದ ತಳವಾರ(2), ವೆಂಕಟೇಶ ಬಡಿಗೇರ(3). ‌100ಮೀ. ಓಟ: ವಿಶಾಲ ಲಮಾಣಿ(1),  ಇರ್ಫಾನ್ ಫನಿಬಂದ್(2), ಶೋಯೆಬ್ ಮುಲ್ಲಾ(3). 200ಮೀ. ಓಟ: ವಿಶಾಲ ಲಮಾಣಿ(1), ರಮೇಶ ಹಂಡರಗಲ್(2), ಶೋಯೆಬ್ ಮುಲ್ಲಾ(3).

400ಮೀ. ಓಟ: ರಮೇಶ ಹಂಡರಗಲ್ಲ(1), ಸುನೀಲ ಮಾಳಿ(2), ಆನಂದ ಇಂಡಿ(3). 800ಮೀ ಓಟ: ಪ್ರಶಾಂತಕುಮಾರ ಕೆ.(1), ಮುತ್ತಪ್ಪ ಯಕನಾಳ(2), ಅರುಣಕುಮಾರ ಸುತಾರ(3). 1500 ಮೀ. ಓಟ: ಪ್ರತೀಕ ದೇಗಾವಿ(1),  ಚೇತನ ಕಣಗಾರ(2), ಪ್ರಶಾಂತಕುಮಾರ ಕೆ.(3)

5,000ಮೀ ಓಟ: ಸಂಗಮೇಶ ಹಳ್ಳಿ(1), ಪ್ರತೀಕ ದೇಗಾಂವಿ(2), ಚೇತನ ಕನ್ನಗಾರ(3) 10,000ಮೀ. ಓಟ:  ಸಂಗಮೇಶ ಹಳ್ಳಿ(1), ಕುಮಾರ ಬಳಗನೆ(2), ಹುಲ್ಲಪ್ಪ ತಮ್ಮಣ್ಣನ್ನವರ(3).

ಮಹಿಳೆಯರು ವಿಭಾಗ:

ಗುಂಡು ಎಸೆತ: ಅಶ್ವಿನಿ ನರಸನ್ನವರ(1), ಮೀನಾಕ್ಷಿ ಲಮಾಣಿ(2), ಶೀತಲ ಮಾದರ(3). ಚಕ್ರ ಎಸೆತ: ಅಶ್ವಿನಿ ನರಸನ್ನವರ(1) ಮೀನಾಕ್ಷಿ ಲಮಾಣಿ(2), ಭುವನೇಶ್ವರ ಬೊಮ್ಮಾಣಿ(3). ಭಲ್ಲೆ ಎಸೆತ: ಸ್ನೇಹಾ ಚವಾಣ(1), ನಿಶಾ ಚವಾಣ(2), ಕಾದಂಬರಿ(3)

ಉದ್ದ ಜಿಗಿತ: ಸಾಕ್ಷಿ ಹಿಪ್ಪರಗಿ(1), ಸ್ನೇಹಾ ಚವಾಣ(2), ದೀಪಾ ಸವಸುದ್ದಿ(3). ಟ್ರಿಪಲ್ ಜಂಪ್: ವಿದ್ಯಾಶ್ರೀ ಬಳಬಟ್ಟಿ(1), ಪ್ರೀತಿ ತೇಲಿ(2), ಪ್ರೇಮಾ ಲಮಾಣಿ(3). 100ಮೀ. ಓಟ: ವಾಣಿಶ್ರಿ ನಾವಿ(1), ಗೀತಾ ಥೋರಾತ (2), ಸುಪ್ರಿತಾ ಗೊನ್ನಾಯ್ಕರ್(3).

200ಮೀ. ಓಟ:ವಾಣಿಶ್ರೀ ನಾವಿ(1), ಅಕ್ಷತಾ ಮಾದರ(2), ಪ್ರೀತಿ ವಾಲ್ಮೀಕಿ(3). 400 ಮೀ. ಓಟ: ಯಲ್ಲಮ್ಮ ತಳವಾರ(1), ಲಕ್ಷ್ಮಿ ಶಿರೋಳ(2) ಕರಿಯವ್ವ ಚಿತ್ತವಾಡಗಿ(3) 800 ಮೀ ಓಟ: ಸಾವಿತ್ರಿ ತೊಂಡಿಹಾಳ(1),  ಸಂಗೀತಾ ಪುರಾಣಿಕಮಠ(2), ಪೂಜಾ ಉಳ್ಳಾಗಡ್ಡಿ(3).

1500ಮೀ ಓಟ: ಸುಮಂಗಲಾ ತೇಲಿ(1), ಸಂಗೀತಾ ಪುರಾಣಿಕಮಠ(2), ಹೇಮವ್ವ ವಾಲೀಕಾರ(3). 5,000 ಮೀ. ಓಟ: ರಾಧಿಕಾ ಪೂಜಾರಿ(1), ಸುಮಂಗಲಾ ತೇಲಿ(2), ಮಹಾಲಕ್ಷ್ಮಿ ಬಸಕಾಳೆ(3). 10,000ಮೀ ಓಟ: ರಾಧಿಕಾ ಪೂಜಾರಿ(1), ಮಹಾಲಕ್ಷ್ಮಿ ಬಸಕಾಳೆ(2),, ಮೀನಾಕ್ಷಿ ಚಲವನ್ನವರ(3). 

ಸಂಗಮೇಶ ಹಳ್ಳಿ
ಅಶ್ವಿನಿ ನರಸನ್ನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.