ADVERTISEMENT

ಕೊರೊನಾ ವೈರಸ್ ಹರಡುವಿಕೆ ಭೀತಿ: ಗ್ರಂಥಾಲಯದಲ್ಲಿ ಕುಳಿತು ಓದಲು ನಿರ್ಬಂಧ

ಮಾರ್ಚ್ 31ರವರೆಗೆ ಓದುಗರಿಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 13:54 IST
Last Updated 18 ಮಾರ್ಚ್ 2020, 13:54 IST
ಓದುಗರನ್ನು ನಿರ್ಬಂಧಿಸಿರುವ ಕಾರಣ ಬಾಗಲಕೋಟೆಯ ನವನಗರದ ಕಲಾಭವನ ಪಕ್ಕದ ಸಾರ್ವಜನಿಕ ಗ್ರಂಥಾಲಯ ಬುಧವಾರ ಬಿಕೊ ಎನ್ನುತ್ತಿತ್ತು
ಓದುಗರನ್ನು ನಿರ್ಬಂಧಿಸಿರುವ ಕಾರಣ ಬಾಗಲಕೋಟೆಯ ನವನಗರದ ಕಲಾಭವನ ಪಕ್ಕದ ಸಾರ್ವಜನಿಕ ಗ್ರಂಥಾಲಯ ಬುಧವಾರ ಬಿಕೊ ಎನ್ನುತ್ತಿತ್ತು   

ಬಾಗಲಕೋಟೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಮಾರ್ಚ್ 31 ರವರೆಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಓದುಗರಿಗೆ ಮುಚ್ಚಲಾಗಿದೆ. ಬದಲಿಗೆ ಪುಸ್ತಕಗಳನ್ನು ಎರವಲು ಪಡೆದು ಮನೆಗೆ ಒಯ್ದು ಓದಬಹುದಾಗಿದೆ.

ಪುಸ್ತಕಗಳನ್ನು ಓದುಗರಿಗೆ ವಿತರಿಸುವ ಸೇವೆ ಮುಂದುವರೆಸಲು ಸಿಬ್ಬಂದಿ ಗ್ರಂಥಾಲಯದಲ್ಲಿ ಹಾಜರಿರುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಮಾರ್ಚ್ 17ರಂದು ಸುತ್ತೋಲೆ ಹೊರಡಿಸಿದ್ದಾರೆ.

ಅದರನ್ವಯ ಬಾಗಲಕೋಟೆಯ ಮುಖ್ಯ ಗ್ರಂಥಾಲಯ, 19 ಶಾಖಾ ಗ್ರಂಥಾಲಯ 157 ಗ್ರಾಮ ಪಂಚಾಯ್ತಿ ಮಟ್ಟದ ಗ್ರಂಥಾಲಯ ಹಾಗೂ 10 ಅಲೆಮಾರಿ, ಕೊಳಚೆ ಪ್ರದೇಶದ ಗ್ರಂಥಾಲಯಗಳನ್ನು ಬುಧವಾರದಿಂದ ಓದುಗರಿಗೆ ಮುಚ್ಚಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಚೀಫ್ ಲೈಬ್ರರಿಯನ್ ಎಂ.ಎಸ್.ರೆಬಿನಾಳ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.