
ರಾಂಪುರ: ಸಮೀಪದ ಬೆನಕಟ್ಟಿಯಲ್ಲಿ ಬುಧವಾರ ಜರುಗಿದ ಸಂಗ್ರಾಣಿ ಕಲ್ಲು ಸಿಡಿ ಎತ್ತುವ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯ ರಿಯಾಜ್ ತೋರಗಲ್ ಪ್ರಥಮ ಸ್ಥಾನ ಪಡೆದರು.
ಮಹಾಯೋಗಿ ವೇಮನರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ವೇಮ ಯುವಕ ಮಂಡಳ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ರಿಯಾಜ್ ತೋರಗಲ್ 92 ಕೆ.ಜಿ ಭಾರದ ಕಲ್ಲು ಎತ್ತುವ ಮೂಲಕ ಪ್ರಥಮ ಬಹುಮಾನ ಪಡೆದರೆ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಿಸನಾಳದ ಕಿರಣ್ ಅರಕೇರಿ 88 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿ ದ್ವಿತೀಯ ಬಹುಮಾನ ಪಡೆದರು.
ಬೀಳಗಿ ತಾಲ್ಲೂಕು ಬಿಸನಾಳದ ರಿಯಾಜ್ ಜಮಾದಾರ (86 ಕೆ.ಜಿ) ತೃತೀಯ, ಅದೇ ಗ್ರಾಮದ ಸಂತೋಷ ಬಿರಾದಾರ (86 ಕೆ.ಜಿ), ಚತುರ್ಥ ಹಾಗೂ ಸುನೀಲ ಬಿರಾದಾರ (84 ಕೆ.ಜಿ) ಐದನೇ ಬಹುಮಾನ ಪಡೆದರು.
ಉದ್ಘಾಟನೆ: ಶ್ಯಾಮು ಮುದಗಲ್ ಹಾಗೂ ಮಾಜಿ ಯೋಧ ಪಂಡಿತ ಮಾಚಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಹನಮಪ್ಪ ಬೆನ್ನೂರ, ಹನಮಪ್ಪ ಯಡಹಳ್ಳಿ, ಲಕ್ಕಪ್ಪ ಬಾಳಕ್ಕನವರ, ಬಸವರಾಜ ಅರಕೇರಿ, ಬಿ.ಆರ್.ಯಡಹಳ್ಳಿ, ರಾಯಪ್ಪ ಬಂಡಿ, ವೆಂಕಟೇಶ ಕಟಗೇರಿ, ರಂಗಪ್ಪ ಬಸರಿ, ರಮೇಶ ಸಣ್ಣಪ್ಪನವರ, ಹಣಮಂತ ಅರಕೇರಿ, ಗೌಡಪ್ಪ ಯಡಹಳ್ಳಿ, ಬಸು ಬಡಿಗೇರ, ರಂಗಪ್ಪ ಅರಿಷಿನಗೋಡಿ, ಎಂ.ವಿ. ಗೊರವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.