ಸತೀಶ ಜಾರಕಿಹೊಳಿ
ಮುಧೋಳ (ಬಾಗಲಕೋಟೆ): ‘ಸಚಿವ ಸತೀಶ ಜಾರಕಿಹೊಳಿ ಶಸ್ತ್ರ ಕೆಳಗಿಡದೇ ಇದೇ ಅವಧಿಯಲ್ಲಿ ಸಿ.ಎಂ ಆಗಬೇಕು ಎಂಬುದು ಜನರ ಆಶಯ’ ಎಂದು ಮಾಜಿ ಸಚಿವ ರಾಜುಗೌಡ ನಾಯಕ ಹೇಳಿದರು.
ಮುಧೋಳದಲ್ಲಿ ಶುಕ್ರವಾರ ಹಲಗಲಿ ಶೂರರಾದ ಜಡಗಣ್ಣ, ಬಾಲಣ್ಣ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾರಕಿಹೊಳಿಯವರೂ ಮುಖ್ಯಮಂತ್ರಿಯಾಗುವ ಕಾರ್ಯ ಮುಂದುವರೆಸಬೇಕು. ಹಿಂದೆ ಸರಿಯಬಾರದು’ ಎಂದರು
ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ ನಮ್ಮ ಗಾಡಿ 40ರ ಸ್ಪೀಡ್‌ನಲ್ಲಿಯೇ ಹೋಗಲಿದೆ. 2028ಕ್ಕೆ ಆಗುವೆ. ಅದಾಗದಿದ್ದರೆ, 2033ರವರೆಗೆ ಕಾಯುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.