ಗುಳೇದಗುಡ್ಡ: ಪಟ್ಟಣದ ಗುರುಸಿದ್ದೇಶ್ವರ ಬೃಹ್ಮಠದ ಕರ್ತೃ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭ, ಗುರುಬಸವ ದೇವರ ಪಟ್ಟಾಭೀಷೇಕ ಮಹೋತ್ಸವ ಹಾಗೂ ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕøತಿಕ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.15 ರಿಂದ 23 ರವರೆಗೆ 9 ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಲಿದೆ ಎಂದು ಬಸವರಾಜ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಶ್ರೀಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಬೆಳಿಗ್ಗೆ 4 ಗಂಟೆಯಿಂದ ಸಾಮೂಹಿಕ ಲಿಂಗ ಪೂಜೆ, ಪಾದೋದಕ ಪ್ರಸಾದ ಹಾಗೂ ಕರ್ತೃ ಗದ್ದುಗೆಗೆ ವಚನಾಭಿಷೇಕ ಜರುಗುವುದು. ಬೆಳಿಗ್ಗೆ 6 ಗಂಟೆಗೆ ಪ್ರಭಾತ ಯಾತ್ರೆ, ಬೆಳಿಗ್ಗೆ 7-30 ಕ್ಕೆ ಶರಣ ಧ್ವಜಾರೋಹಣ ಜರುಗುವುದು.
ಭಾನುವಾರ ಡಿ.15 ರಂದು ಬೆಳಿಗ್ಗೆ 10-30 ರಿಂದ ರಕ್ತದಾನ, ಆರೋಗ್ಯ ಶಿಬಿರ, ಸಂಜೆ 6-30 ಘಂಟೆಗೆ ಶರಣ ಸಂಗಮ ಸಮಾರಂಭ ಉದ್ಘಾಟನೆ ಹಾಗೂ ಶಿವಶರಣ ಮಾದಾರ ಚನ್ನಯ್ಯ ಜಯಂತಿ ಮಹೋತ್ಸವ ಜರುಗುವುದು. ಸೋಮವಾರ ಡಿ.16 ರಿಂದ 23 ರರವರೆಗೆ ಪ್ರತಿದಿನ ಬೆಳಿಗ್ಗೆ 10:30ಕ್ಕೆ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಸಂಜೆ 6-30 ವಿಶೇಷ ಕಾರ್ಯಕ್ರಮ ಜರುಗುವವು.
ಡಿ.22 ರಂದು ಭಾನುವಾರ ಸಂಜೆ 6-30ಕ್ಕೆ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಜರುಗುವದು. ಇದೇ ಸಂದರ್ಭದಲ್ಲಿ ವಿದ್ಯಾನಿಧಿ ಯೋಜನೆ ಉದ್ಘಾಟನೆಯಾಗಲಿದೆ. ಡಿ.23 ರಂದು ಸೋಮವಾರ ಅಹೋರಾತ್ರಿ ಕರ್ತೃ ಗದ್ದುಗೆಗೆ ಮಹಾವಚನಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗುವುದು. ಬೆಳಿಗ್ಗೆ 6ಕ್ಕೆ ಗುರುದೀಕ್ಷೆ ಪಟ್ಟಾಭೀಷೇಕ ವಿಧಿ ವಿಧಾನ ಜರುಗುವುದು.
ಬೆಳಿಗ್ಗೆ 8:30ಕ್ಕೆ ಶರಣ ಧ್ವಜಾರೋಹಣ, 9:30ಕ್ಕೆ ಸರ್ವ ಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ, ಪಟ್ಟಾಭೀಷೇಕ ನಿಮಿತ್ತ ಶರಣ ಸಂಗಮ ಸ್ಮರಣ ಸಂಚಿಕೆ ಬಿಡುಗಡೆ ಜರುಗುವುದು. ಬೆಳಿಗ್ಗೆ 10-30ಕ್ಕೆ ಸಿಂಹಾಸನಾರೋಹನ ಜರುಗುವುದು. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದು ಹೇಳಿದರು.
ಗುರುಬಸವ ದೇವರು, ಸಂಗಪ್ಪ ಜವಳಿ, ಸಂಸ್ಥೆಯ ಚೇರಮನ್ ರಾಜು ಜವಳಿ, ಅಶೋಕ ಹೆಗಡಿ, ಈರಣ್ಣ ಶೇಖಾ, ಸಿ.ಎಂ.ಚಿಂದಿ, ಗೌರಮ್ಮ ಕಲಬುರ್ಗಿ, ಸೋಮು ಕಲಬುರ್ಗಿ ಸೇರಿದಂತೆ ಇನ್ನಿತರ ಶ್ರೀಮಠದ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.