ರಾಂಪುರ: ಸಮೀಪದ ಶಿರೂರ ಪಟ್ಟಣದ ಮಳೆರಾಜೇಂದ್ರ ಸ್ವಾಮಿಗಳ ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯದ ಪ್ರಯುಕ್ತ ಭಕ್ತರು ಭಾನುವಾರ ಹಮ್ಮಿಕೊಂಡ ಜೋಡು ಎತ್ತಿನ ಕೂಡು ಪುಟ್ಟಿಬಂಡಿ ಓಟದ ಸ್ಫರ್ಧೆಯಲ್ಲಿ ಶಿರೂರಿನ ಮನೋಜ ಗಾಳಿ ಅವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು.
ಗುಳೇದಗುಡ್ಡ ತಾಲ್ಲೂಕಿನ ಬೂದಿನಗಡದ ಮೂಕೇಶ್ವರಿ ಜೋಡೆತ್ತುಗಳು ದ್ವಿತೀಯ, ಶಿರೂರಿನ ಸಿದ್ದಪ್ಪ ಗಾಳಿ ಅವರ ಎತ್ತುಗಳು ತೃತೀಯ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಹೊಳೆಹಂಗರಗಿಯ ಮಲ್ಲಪ್ಪ ಮುದ್ದಾಪುರ ಅವರ ಎತ್ತುಗಳು ಚತುರ್ಥ ಬಹುಮಾನ ಪಡೆದವು.
ಸ್ಥಳೀಯ ಶಿವಯೋಗಾಶ್ರಮದ ಸಿದ್ಧಲಿಂಗ ಶ್ರೀ ಸ್ಪರ್ಧೆಗೆ ಚಾಲನೆ ನೀಡಿದರು.
ಮುರನಾಳದ ಜಗನ್ನಾಥ ಶ್ರೀ, ಉಮೇಶ ಮೇಟಿ, ರಂಗಪ್ಪ ಮಳ್ಳಿ, ಸಂಗಣ್ಣ ಹಂಡಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಾನಂದ ಆಲೂರ, ಸಿದ್ದಪ್ಪ ಕೋಟಿಕಲ್ಲ, ಮುದಕಪ್ಪ ಬಿಲ್ಲಾರ, ಸಿದ್ದಪ್ಪ ಹಂಡರಗಲ್ಲ, ಹನಮಂತ ಆಡಿನ, ಜಗದೀಶ ದೇಸಾನಿ, ಎಸ್.ಬಿ. ಮಾಚಾ, ಎಸ್.ಎಫ್. ಬಾರಡ್ಡಿ, ಶ್ರೀಶೈಲ ಮಲಘಾಣ, ಶಿವು ಕಾಮರಡ್ಡಿ, ಸಿದ್ದಪ್ಪ ಗಾಳಿ, ಸುರೇಶ ರಾಜೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.