ರಾಂಪುರ: ಸಮೀಪದ ಶಿರೂರ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಮಾರ್ಚ್ ಅಂತ್ಯಕ್ಕೆ ₹9 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿದ್ದಪ್ಪ ಹಂಡರಗಲ್ಲ ತಿಳಿಸಿದರು.
ಮಂಗಳವಾರ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಂಘದ ಪ್ರಗತಿಗೆ ರೈತರು, ಷೇರುದಾರರು ಹಾಗೂ ಸಾಲಗಾರರ ಸಹಕಾರ ಮುಖ್ಯ’ ಎಂದರು.
‘ಸಹಕಾರ ಸಂಘ ರೈತರ ಏಳಿಗೆಗೆ ಶ್ರಮಿಸುತ್ತಿದ್ದು, ಮುಂಗಾರು ಹಂಗಾಮಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ವಿತರಿಸಿದ್ದು, ಕೃಷಿ ಸಾಲವನ್ನು ಸಮರ್ಪಕವಾಗಿ ವಿತರಿಸಲಾಗಿದೆ’ ಎಂದರು.
ಸ್ಥಳೀಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಪವಾರ, ‘ರೈತರು ಸಹಕಾರ ಸಂಘಗಳಲ್ಲಿ ಕೃಷಿ ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘದ ಅಭಿವೃದ್ದಿ ಸಾಧ್ಯ’ ಎಂದು ಹೇಳಿದರು.
ಸಂಘದ ಸಹಾಯಕ ಮುಖ್ಯಕಾರ್ಯನಿರ್ವಾಹಕ ಎಂ.ಎಸ್.ನರೇಗಲ್ಲ ವರದಿ ಮಂಡಿಸಿದರು.
ಸಂಘದಿಂದ ಅತಿ ಹೆಚ್ಚು ಗೊಬ್ಬರ ಖರೀದಿಸಿದ ರೈತ ಸೈದಪ್ಪ ಸಿಂಪಿ ಹಾಗೂ ರಾಜಶೇಖರ ಬಾವಲತ್ತಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಭೀಮಪ್ಪ ದಾಸಪ್ಪನವರ, ಮುಖ್ಯಕಾರ್ಯನಿರ್ವಾಹಕ ಎಚ್.ಬಿ.ಬಾರಡ್ಡಿ, ನಿರ್ದೇಶಕರಾದ ಲಿಂಗಶೆಟ್ಟೆಪ್ಪ ಕೆರೂರ, ಈರಪ್ಪ ದೇಸಾನಿ, ಸಿದ್ದಪ್ಪ ಹಿರೇಕುಂಬಿ, ಮುದಕಪ್ಪ ಆಡಿನ, ಮುದಕಪ್ಪ ಬಿಲ್ಲಾರ, ಶಿವಕುಮಾರ ನಡುವಿನಮನಿ, ಶಿವಪುತ್ರಪ್ಪ ಕಟ್ಟಿಮನಿ, ಮಳಿಯಪ್ಪ ಮುದಗಲ್ಲ, ಪಾರವ್ವ ನೆರಕಿ, ಸಾವಿತ್ರಿ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.