ಗುಳೇದಗುಡ್ಡ: ಶ್ರಾವಣ ಅತ್ಯಂತ ಪವಿತ್ರವಾದ ಮಾಸವಾಗಿದೆ. ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ಅಧ್ಯಾತ್ಮ, ಧರ್ಮ, ಶರಣ ಸಂಸ್ಕೃತಿ, ಸಂಸ್ಕಾರದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡು ಅದನ್ನು ಮುಂದಿನ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ನಡೆದರೆ ಬದುಕು ಪಾವನವಾಗುತ್ತದೆ ಎಂದು ಗುರುಸಿದ್ಧ ಪಟ್ಟದಾರ್ಯ ಶ್ರೀ ಹೇಳಿದರು.
ಪಟ್ಟಣದ ಗುರುಸಿದೇಶ್ವರ ಬೃಹನ್ಮಠದಲ್ಲಿ ಗುರುವಾರ ನಡೆದ ಶ್ರಾವಣಮಾಸದ ವಚನೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸವೆಂದರೆ ಈ ಮಾಸದಲ್ಲಿ ನಾವೆಲ್ಲ ಭಕ್ತಿ, ಶ್ರದ್ಧೆಯಿಂದ ಉತ್ತಮ ಆಚಾರ, ವಿಚಾರಗಳನ್ನು ಧರ್ಮ, ಸಂಸ್ಕೃತಿಯನ್ನು ಶರಣರಿಂದ, ಪೂಜ್ಯರಿಂದ ಶ್ರವಣ ಮಾಡುವುದಾಗಿದೆ ಎಂದರು.
ಮಠದ ವಿಶ್ರಾಂತ ಗುರುಗಳಾದ ಬಸವರಾಜ ಪಟ್ಟದಾರ್ಯ ಶ್ರೀ, ಶರಣ ಧರ್ಮ ನಮ್ಮ ಜೀವನಕ್ಕೆ ಆಧಾರವಾಗಬೇಕು. ಶರಣರ ಆದರ್ಶ ತತ್ವ ಸಿದ್ಧಾಂತ, ಅವರ ನಡೆ ನುಡಿ ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಅವರ ಆದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಪಾಲಿಸೋಣ ಎಂದರು.
ಈರಣ್ಣ ಶೇಖಾ, ವಿರುಪಾಕ್ಷಪ್ಪ ಅರುಟಗಿ, ಭಾಗ್ಯಾ ಉದ್ನೂರ, ಸುರೇಶ ರಾಜನಾಳ, ಗೌರಮ್ಮ ಕಲಬುರ್ಗಿ, ನಾಗರತ್ನಾ ಎಣ್ಣಿ, ದ್ರಾಕ್ಷಾಯಣಿ ಗೊಬ್ಬಿ ಶಿವಪ್ಪ ಕಲಬುರ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.