ಕೂಡಲಸಂಗಮ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಡಾ ಹಗರಣ ಆರೋಪ ಹಾಗೂ ಎಲ್ಲ ಕಂಟಕಗಳಿಂದ ಮುಕ್ತನಾಗಬೇಕು ಎಂದು ಹರಕೆ ಹೊತ್ತಿದ್ದ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ಶ್ರೀಶೈಲ ವಾಲೀಕಾರ ಹರಕೆ ತೀರಿಸಿದರು.
ಕೂಡಲಸಂಗಮ ಕ್ರಾಸ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಶಿವಾನಂದ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ದೀರ್ಘದಂಡ ನಮಸ್ಕಾರ ಆರಂಭಿಸಿದರು. ನಿತ್ಯ 1 ಕಿ.ಮೀ ದೀರ್ಘದಂಡ ನಮಸ್ಕಾರ ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಸಿದ್ದರಾಮಯ್ಯನವರ ಅಭಿಮಾನಿಯಾದ ಶ್ರೀಶೈಲ ವಾಲೀಕರ ಕೂಡಲಸಂಗಮನಾಥ ಹಾಗೂ ಬಸವೇಶ್ವರರ ಐಕ್ಯಮಂಟಪದ ದರ್ಶನ ಮಾಡಿ ಹರಕೆ ಪೂರ್ಣಗೊಳಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.