ADVERTISEMENT

ರಬಕವಿ ಬನಹಟ್ಟಿ: ಬೋನು ಸೇರಿದ ಬೀದಿ ನಾಯಿಗಳು

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:31 IST
Last Updated 23 ಜುಲೈ 2025, 2:31 IST
<div class="paragraphs"><p>ರಬಕವಿ ಬನಹಟ್ಟಿಯಲ್ಲಿ ಬೀದಿ ನಾಯಿಗಳನ್ನು ಬೋನಿಗೆ ಹಾಕಿರುವುದು</p></div>

ರಬಕವಿ ಬನಹಟ್ಟಿಯಲ್ಲಿ ಬೀದಿ ನಾಯಿಗಳನ್ನು ಬೋನಿಗೆ ಹಾಕಿರುವುದು

   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಕುರಿತು ‘ಪ್ರಜಾವಾಣಿ’ಯು ಜುಲೈ 22ರಂದು ‘ನಾಯಿ, ದನ, ಕತ್ತೆ ಕಾಟ ಜನ ಹೈರಾಣ’ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಮಂಗಳವಾರ ಬೆಳಿಗ್ಗೆ ನಗರಸಭೆಯ ಸಿಬ್ಬಂದಿ ವರ್ಗದವರು ಮತ್ತು ಬೀದಿ ನಾಯಿಗಳನ್ನು ಹಿಡಿಯುವವರ ಜೊತೆಗೂಡಿ ನೂರಾರು ನಾಯಿಗಳನ್ನು ಸೆರೆ ಹಿಡಿದು ಬೋನಿಗೆ ಹಾಕಿ ತೆಗೆದುಕೊಂಡು ಹೋದರು.

ADVERTISEMENT

ಈ ಕುರಿತು ತಾಲ್ಲೂಕು ವೈದ್ಯಾಧಿಕಾರಿ ಡಾ. ಜಿ.ಎಚ್.ಗಲಗಲಿ ಮಾತನಾಡಿ, ಬೀದಿ ನಾಯಿ ಕಾಟ ಮತ್ತು ಕಡಿತದ ಕುರಿತು ಜಮಖಂಡಿಯ ಉಪವಿಭಾಗಾಧಿಕಾರಿಗಳ ಜೊತೆ ಚರ್ಚೆ ಮಾಡಿದ ನಂತರ ಮತ್ತು ಉಪವಿಭಾಗಾಧಿಕಾರಿಗಳು ಕೂಡಾ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತರ ಜೊತೆಗೆ ಮಾತನಾಡಿ, ಶೀಘ್ರವೇ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.