ADVERTISEMENT

ಬಾದಾಮಿ: ಮಲಪ್ರಭಾ ನದಿ ಒಡಲು ಖಾಲಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 14:08 IST
Last Updated 19 ಮಾರ್ಚ್ 2024, 14:08 IST
ಬಾದಾಮಿ ಸಮೀಪದ ಪಟ್ಟದಕಲ್ಲು ಗ್ರಾಮದ ಬಳಿ ಬತ್ತಿರುವ ಮಲಪ್ರಭಾ ನದಿ
ಬಾದಾಮಿ ಸಮೀಪದ ಪಟ್ಟದಕಲ್ಲು ಗ್ರಾಮದ ಬಳಿ ಬತ್ತಿರುವ ಮಲಪ್ರಭಾ ನದಿ   

ಬಾದಾಮಿ: ತಾಲ್ಲೂಕಿನಲ್ಲಿರುವ ಮಲಪ್ರಭಾ ನದಿಯ ಒಡಲು ಖಾಲಿಯಾಗಿ ಕುಡಿಯುವ ನೀರಿಗಾಗಿ ಜನರು ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ.

ಜನವರಿ ಕೊನೆಯ ವಾರದಲ್ಲಿ ನವಿಲುತೀರ್ಥ ಜಲಾಶಯದಿಂದ ನೀರು ಬಿಡಲಾಗಿತ್ತು. ಆದರೆ ಈಗ ಮತ್ತೆ ಸಂಪೂರ್ಣವಾಗಿ ನದಿ ಬತ್ತಿದೆ. ನದಿ ದಂಡೆಯಲ್ಲಿ 45ಕ್ಕೂ ಅಧಿಕ ಗ್ರಾಮಗಳ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ.

ಒಂದು ಟಿಎಂಸಿ ನೀರು ಬಿಡುವಂತೆ ತಾಲ್ಲೂಕಿನ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ನೀರಾವರಿ ಇಲಾಖೆ ಮತ್ತು ತಹಶೀಲ್ದಾರ್‌ಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ADVERTISEMENT

‘ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡಲು ಸಂಬಂಧಿಸಿದ ಹಿರಿಯ ಅಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ರುದ್ರಪ್ಪ ಹಲಗತ್ತಿ ಮಂಗಳವಾರ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಬಾದಾಮಿ ಸಮೀಪದ ಶಿವಯೋಗಮಂದಿರ ಹತ್ತಿರದ ಮಲಪ್ರಭಾ ನದಿ ಬ್ಯಾರೇಜಿನಲ್ಲಿ ನೀರಿಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.