ADVERTISEMENT

ತೇರದಾಳ: ಮೂವರು ಮಹಿಳೆಯರಿಂದ ಸಲ್ಲೇಖನ ವೃತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 20:43 IST
Last Updated 5 ಜನವರಿ 2025, 20:43 IST
ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲ್ಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಆಚಾರ್ಯ ಕುಲರತ್ನಭೂಷಣ ಮಹಾರಾಜರ ಎದುರಿನಲ್ಲಿ ಯಮಸಲ್ಲೇಖನ ವೃತದಲ್ಲಿರುವ ಮೂವರು ಮಾತೆಯರು
ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲ್ಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಆಚಾರ್ಯ ಕುಲರತ್ನಭೂಷಣ ಮಹಾರಾಜರ ಎದುರಿನಲ್ಲಿ ಯಮಸಲ್ಲೇಖನ ವೃತದಲ್ಲಿರುವ ಮೂವರು ಮಾತೆಯರು   

ತೇರದಾಳ (ಬಾಗಲಕೋಟೆ ಜಿಲ್ಲೆ): ‘ಜೈನ ಧರ್ಮದ ಪರಂಪರೆಯಲ್ಲಿ ವ್ಯಕ್ತಿಯ ಜೀವನದ ಕೊನೆಯ ಕಠಿಣ ನಿಯಮವಾದ ಯಮಸಲ್ಲೇಖನ ವೃತವನ್ನು ಹಳಿಂಗಳಿಯ ಭದ್ರಗಿರಿ ಬೆಟ್ಟದ ಕ್ಷೇತ್ರದಲ್ಲಿ ಮೂವರು ಮಾತಾಜಿಗಳು ಆಚರಿಸುತ್ತಿದ್ದಾರೆ’ ಎಂದು ಆಚಾರ್ಯಶ್ರೀ 108 ಕುಲರತ್ನಭೂಷಣ ಮಹಾರಾಜ ತಿಳಿಸಿದರು. 

ಭದ್ರಗಿರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘772 ಜೈನಮುನಿಗಳು ಈ ಕ್ಷೇತ್ರಕ್ಕೆ ಬಂದು ಸಲ್ಲೇಖನ ಪಡೆದುಕೊಂಡ ಪುಣ್ಯಭೂಮಿ ಭದ್ರಗಿರಿ. ಅಂತಹ ಕ್ಷೇತ್ರದಲ್ಲಿ ದರ್ಶನ ಭೂಷಣ ಮತಿ (ವಿಜಯಪುರ), ಜ್ಞಾನಭೂಷಣಮತಿ(ಕೊಲ್ಲಾಪುರ) ಹಾಗೂ ಚಾರಿತ್ರ್ಯಭೂಷಣಮತಿ ಮಾತಾಜಿ(ಬೆಳಗಾವಿ) ಅವರು ಯಮಸಲ್ಲೇಖನ ವೃತ ಆಚರಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.