
ಮಹಾಲಿಂಗಪುರ: ಪಟ್ಟಣದ ಕೆಎಲ್‍ಇ ಸಂಸ್ಥೆಯ ಪದವಿ ಕಾಲೇಜು ಹಾಗೂ ಮಹಾಲಿಂಗಪುರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ನಲ್ಲಿ ತುಮಕೂರಿನ ವರುಣ ರೆಡ್ಡಿ ಮತ್ತು ಲಿಖಿತ ಜೋಡಿ ಹಾಗೂ 75+ ಜಂಬಲ್ ಡಬಲ್ಸ್ ನಲ್ಲಿ ಪುಣೆಯ ಗಣೇಶ ಮತ್ತು ಜಾಕೀರ ಜೋಡಿ ಪ್ರಥಮ ಸ್ಥಾನ ಪಡೆಯಿತು.
ಕೆಎಲ್‍ಇ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯಾವಳಿಯ ಪುರುಷರ ಡಬಲ್ಸ್ ಹಾಗೂ 75+ ಜಂಬಲ್ ಡಬಲ್ಸ್ ನ ಎರಡು ವಿಭಾಗದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರುಷರ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದ ವರುಣ ರೆಡ್ಡಿ ಮತ್ತು ಲಿಖಿತ ಜೋಡಿಗೆ ₹25 ಸಾವಿರ, ದ್ವಿತೀಯ ಸ್ಥಾನ ಪಡೆದ ಪುಣೆಯ ಗಣೇಶ ಮತ್ತು ತೇಜಸ್ ಜೋಡಿಗೆ ₹15 ಸಾವಿರ, ತೃತೀಯ ಬಾಗಲಕೋಟೆಯ ವಿರುಪಾಕ್ಷ ಮತ್ತು ಇರ್ಫಾನ್ ಜೋಡಿಗೆ ₹10 ಸಾವಿರ ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಯಿತು.
75+ ಜಂಬಲ್ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದ ಪುಣೆಯ ಗಣೇಶ ಮತ್ತು ಜಾಕೀರ್ ಜೋಡಿಗೆ ₹15 ಸಾವಿರ, ದ್ವಿತೀಯ ಸ್ಥಾನ ಪಡೆದ ಕೊಲ್ಲಾಪುರದ ರಾಕೇಶ ಮತ್ತು ಅವಧೂತ ಜೋಡಿಗೆ ₹10 ಸಾವಿರ, ತೃತೀಯ ಸ್ಥಾನ ಪಡೆದ ಗಂಗಾವತಿಯ ರಾಜೇಶ ಮತ್ತು ತಿಲಕ ಜೋಡಿಗೆ ₹7 ಸಾವಿರ ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಯಿತು.
ಹುಚ್ಚೇಶ ವಡ್ಡರ, ಮಹಾಲಿಂಗ ಕರೆಹೊನ್ನ, ಬಸವರಾಜ ರಾಯರ, ರಾಜೇಶ ಬಾಗೋಜಿ, ಪಾಂಡು ಹಂಪಿಹೊಳಿ, ಪರಮಾನಂದ ಹಿಪ್ಪರಗಿ, ಮೋನಪ್ಪ ಬಟ್ಟಲ, ಸುರೇಶ ಆಸಂಗಿ, ಅಶೋಕ ಅಂಗಡಿ, ಕೋಚ್ ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.