ಗುಳೇದಗುಡ್ಡ: ‘ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನದಿಂದ ಸಾಕಷ್ಟು ಪ್ರಯೋಜನವಿದ್ದೂ, ಡ್ರೋನ್ ದಂತಹ ಹೊಸ ಹೊಸ ತಂತ್ರಜ್ಞಾನ ಬಳಸಿ ರೈತರು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು’ ಎಂದು ಬಾಗಲಕೋಟೆಯ ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ. ರೋಡಗಿ ಹೇಳಿದರು.
ಪಟ್ಟಣದ ಹರದೊಳ್ಳಿ ಗ್ರಾಮದ ವ್ಯಾಪ್ತಿಯ ರೈತರ ಜಮೀನಿನಲ್ಲಿ ಜರುಗಿದ ಮೆಕ್ಕೆಜೋಳ ಬೆಳೆಗೆ ಡ್ರೋನ್ ಮುಖಾಂತರ ನ್ಯಾನೋ ಯೂರಿಯಾ ಸಿಂಪಡಣೆಯ ಪಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಲಕ್ಕೆ ತಕ್ಕಂತೆ ರೈತರು ಕೃಷಿಯಲ್ಲಿ ಬದಲಾವಣೆಯನ್ನು ತಂದಾಗ ಹೆಚ್ಚಿನ ಇಳುವರಿ ಹಾಗೂ ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಗೊಬ್ಬರವನ್ನು ಈ ಮೊದಲಿನಿಂದ ಬೇರಿಗೆ ಕೊಡುವ ಪದ್ಧತಿಯಿತ್ತು. ಇದರಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಈಗ ಈ ವಿಧಾನದ ಬದಲಿಗೆ ಬೆಳೆಯ ಎಲೆಗಳಿಗೆ ಕೊಡುವುದರಿಂದ ಅದರ ಮೂಲಕ ಸಿಂಪಡಿಸಿದ ಯೂರಿಯಾ ಬೇರಿಗೆ ತಲುಪಿ ಇಳುವರಿ ಚೆನ್ನಾಗಿ ಬರುತ್ತದೆ’ ಎಂದರು.
‘ರೈತರು ಮಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯೂರಿಯಾದ ಮೇಲೆ ಹೆಚ್ಚು ಅವಲಂಬಿತರಾಗದೇ ಜೈವಿಕ, ಸಾವಯವ ಗೊಬ್ಬರವನ್ನೂ ಬಳಸುವುದು ಉತ್ತಮ. ಡ್ರೋಣ ತಂತ್ರಜ್ಞಾನದಿಂದ ಒಂದು ಎಕರೆಗೆ ಯುರಿಯಾ ಸಿಂಪಡಿಸಲು ಕೇವಲ 5 ರಿಂದ 8 ನಿಮಿಷ ಸಾಕು. ಕಾರ್ಮಿಕರ ಅಭಾವ ನೀಗಿಸುವಿಕೆಯಂತಹ ಪ್ರಯೋಜನಗಳು ಆಗುತ್ತವೆ’ ಎಂದರು.
ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕನ್ನವರ್, ಎಸ್.ಬಿ.ಹುಳ್ಳೋಳ್ಳಿ, ಬಸವರಾಜ ಮಾಳೇದ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮೊಕಾಶಿ, ಇದ್ದಲಗಿ, ಪ್ರಗತಿಪರ ರೈತರಾದ ಘಂಟೇಶ ಬೀಳಗಿ, ಮಾರುತಿ ನ್ಯಾಮನಗೌಡ್ರ, ಯಲ್ಲಪ್ಪ ಬಸರಕೋಡ, ಯಮನಪ್ಪ ಹಿರೇಗೌಡರ, ಸಿದ್ದಪ್ಪ ಗೌಡ್ರ, ಮೂಕಪ್ಪ ಹುನ್ನೂರ, ಶಿವಲಿಂಗಪ್ಪ ಹಡಪದ, ಕೆ.ಬಿ.ಸೀತಿಮನಿ, ರಾಮಣ್ಣ ಬಂಡಿವಡ್ಡರ, ಅತ್ತಾರ, ಶಿವಜಾತಯ್ಯ ಹಿರೇಮಠ, ಮಲ್ಲನಗೌಡ ಗೌಡ್ರ, ಕೋಟೆಕಲ್ ಪಿಕೆಪಿಎಸ್ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಕೃಷಿ ಅಧಿಕಾರಿ ಆನಂದಗೌಡ ಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.