ಬಾಗಲಕೋಟೆ: ನಗರದ ಬಿಜೆಪಿ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಬಿಜೆಪಿ ಕಚೇರಿ: ಅಧಿಕಾರಕ್ಕಿಂತ ಧರ್ಮದ ಮೌಲ್ಯಗಳು ಮುಖ್ಯ ಎಂದು ಸಾರಿದ ಮಹರ್ಷಿ ವಾಲ್ಮೀಕಿಯ ರಾಮರಾಜ್ಯವನ್ನು ಪ್ರಧಾನಿ ಮೋದಿ ನನಸು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜಿನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಅಧಿಕಾರವನ್ನು ಧರ್ಮದ ಹಾದಿಯಲ್ಲಿ ಪಡೆಯಬೇಕು. ನ್ಯಾಯ ನಿಷ್ಠೆ, ಪ್ರಾಮಾಣಿಕತೆಯಿಂದ ಅಧಿಕಾರ ನಡೆಸಬೇಕು ಎಂದು ಮಹರ್ಷಿ ವಾಲ್ಮೀಕಿ ಹೇಳಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾ ರಾವ್, ಡಾ.ಎಂ.ಎಸ್. ದಡ್ಡೆನ್ನವರ, ಅಯ್ಯಪ್ಪ ವಾಲ್ಮೀಕಿ, ರಾಜು ಮುದೇನೂರ, ಬಸವರಾಜ ಯಂಕಂಚಿ, ಸರಸ್ವತಿ ಕುರಬರ, ಶಶಿಕಲಾ ಮಜ್ಜಗಿ, ಶಾಂತಾ ಹನಮಕ್ಕನವರ, ಪ್ರೇಮಾ ಅಂಬಿಗೇರ, ಚನ್ನಯ್ಯ ಹಿರೇಮಠ ಮತ್ತಿತರರು ಇದ್ದರು.
ಕಾಂಗ್ರೆಸ್ ಕಚೇರಿ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿಯ ಮಹಾನ್ ಋಷಿ. ಅವರ ‘ರಾಮಾಯಣ’ ಕಾವ್ಯವು ಸತ್ಯ, ಧರ್ಮ ಮತ್ತು ನೈತಿಕ ಮೌಲ್ಯಗಳ ಶಾಶ್ವತ ದೀಪಸ್ತಂಭವಾಗಿದೆ. ಕಾಂಗ್ರೆಸ್ ಸದಾ ಸಾಮಾಜಿಕ ನ್ಯಾಯ ಮತ್ತು ಸರ್ವಧರ್ಮ ಸಮಭಾವದ ಪರವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ಹನುಮಂತ ಡೋಣಿ, ಶಂಕರ ನಾಯಕ, ಎನ್.ಬಿ. ಗಸ್ತಿ, ಶ್ರೀಧರ ನೀಲನಾಯಕ, ಕುತ್ಬುದ್ದೀನ್ ಖಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.