ಕೆರೂರ: ಇಂದಿನ ಯುವಕರಿಗೆ ಕಲೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಹಿರಿಯ ಕಲಾವಿದರು ಆದರ್ಶ ಯುವಕರಿಗೆ ಸ್ಪೂರ್ತಿಯಾಗಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ.ಜಿ ಕಿತ್ತಲಿ ಹೇಳಿದರು.
ಪಟ್ಟಣದ ಗೊಂದಳಿ ಸಮಾಜ ಬಾಂಧವರು ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಪದ್ಮಶ್ರೀ ಪುರಸ್ಕೃತ ವೆಂಕಪ್ಪ ಸುಗತೇಕರ ಅವರ ಕಲಾ ಸೇವೆ ಇನ್ನಷ್ಟು ಹೆಚ್ಚಲಿ, ಜಿಲ್ಲೆಯ ಹೆಸರು ವಿಶ್ವ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಶಿಕ್ಷಣದ ಮುಖಾಂತರ ವ್ಯಕ್ತಿಗಳು ಸ್ವಾಲಂಬಿ ಬದುಕನ್ನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಮಾರುತಿ ವಾಸ್ಟರ್, ಶಿವಾಜಿ ಬೋಳೆ, ಕೃಷ್ಣಾ ಬೋಳೆ, ಟೋಪಣ್ಣಾ ವಾಸ್ಟರ್, ತುಕಾರಾಮ ಸುಗಟೆ, ತುಕಾರಾಮ ಬೋಳೆ, ಯಮನೂರ ವಡ್ಡರ, ಸಂತೋಷ ಕ್ಷತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.