ADVERTISEMENT

ಕಳಸದ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸಕ್ಕೆ ಚಾಲನೆ

ಶ್ರೀಮಠಕ್ಕೆ ಬುತ್ತಿರೊಟ್ಟಿ ತಂದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 16:59 IST
Last Updated 2 ಜೂನ್ 2023, 16:59 IST
ಬಿಲ್ ಕೆರೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಬುತ್ತಿರೊಟ್ಟಿ ಮಾಡಿಕೊಂಡು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಬಿಲ್ವಾಶ್ರಮ ಹಿರೇಮಠಕ್ಕೆ ಬಂದರು.
ಬಿಲ್ ಕೆರೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಬುತ್ತಿರೊಟ್ಟಿ ಮಾಡಿಕೊಂಡು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಬಿಲ್ವಾಶ್ರಮ ಹಿರೇಮಠಕ್ಕೆ ಬಂದರು.   

ರಾಂಪುರ: ಸಮೀಪದ ಬಿಲ್ ಕೆರೂರ ಗ್ರಾಮದ ಬಿಲ್ವಾಶ್ರಮ ಹಿರೇಮಠದ ಮೌನ ತಪಸ್ವಿ ಲಿಂ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳವರ 42 ನೇ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರದಿಂದ ಆರಂಭಗೊಂಡ ಜಾತ್ರಾ ಮಹೋತ್ಸವಕ್ಕೆ ಕಳಸದ ಮೆರವಣಿಗೆ ಹಾಗೂ ಊರಿನ ಜನ ಶ್ರೀಮಠಕ್ಕೆ ಬುತ್ತಿರೊಟ್ಟಿ ತರುವುದರೊಂದಿಗೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಶ್ರೀಮಠದಲ್ಲಿ ಹೋಮ-ಹವನ, ಪೂಜಾ ಕಾರ್ಯಗಳು ನಡೆದು ಮಠದಲ್ಲಿರುವ ದೇವಸ್ಥಾನಗಳಲ್ಲಿ ಅಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ ಬೇವೂರಿನ ಮಲ್ಲಮ್ಮ ತುರಡಗಿ ಕುಟುಂಬದವರು ಕೊಡಮಾಡಿರುವ ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ನಡೆದು ಶ್ರೀಮಠಕ್ಕೆ ಆಗಮಿಸಿತು.

ಕಳಸದ ಮೆರವಣಿಗೆ ಗ್ರಾಮದ ಮಾರುತೇಶ್ವರ ದೇವಸ್ಥಾನದ ಬಳಿ ಬರುತ್ತಿದ್ದಂತೆ ಅಲ್ಲಿ ಬುತ್ತಿರೊಟ್ಟಿಯೊಂದಿಗೆ ಜಮಾವಣೆಗೊಂಡಿದ್ದ ಗ್ರಾಮದ ಸಮಸ್ತ ಭಕ್ತರು ತಲೆಯ ಮೇಲೆ ಬುತ್ತಿರೊಟ್ಟಿಯ ಗಂಟು ಹೊತ್ತು ಸಾಗಿಬಂದರು. ರೊಟ್ಟಿ, ಬಾನ, ವಿವಿಧ ರೀತಿಯ ಪಲ್ಲೆ, ಚಟ್ನಿ, ಸಿಹಿ ಪದಾರ್ಥಗಳನ್ನು ತಯಾರಿಸಿಕೊಂಡು ಬರುವ ಗ್ರಾಮಸ್ಥರು ರಾತ್ರಿಯಿಡಿ ಶ್ರೀಮಠದಲ್ಲಿ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಆಗಮಿಸುವ ಭಜನಾ ತಂಡಗಳಿಗೆ ಬುತ್ತಿ ಉಣಿಸಿ ಹರಕೆ ತೀರಿಸುವುದು ವಾಡಿಕೆ.

ADVERTISEMENT

ಶ್ರೀಮಠದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗ್ರಾಮಸ್ಥರು ಬುತ್ತಿರೊಟ್ಟಿ ಸೇವೆ ಮಾಡುತ್ತಾರೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಸೇವಾ ಕಾರ್ಯದಲ್ಲಿ ಪ್ರತಿ ಕುಟುಂಬವೂ ಭಾಗಿಯಾಗಿ ಮಠಕ್ಕೆ ಬರುವ ಭಕ್ತರಿಗೆ ಉಣಬಡಿಸುವ ಸಂಪ್ರದಾಯವಿದೆ ಎಂದು ಶ್ರೀಮಠದ ಪೂಜ್ಯರಾದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳುತ್ತಾರೆ.

ಬಿಲ್ ಕೆರೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಬುತ್ತಿರೊಟ್ಟಿ ಮಾಡಿಕೊಂಡು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಬಿಲ್ವಾಶ್ರಮ ಹಿರೇಮಠಕ್ಕೆ ಬಂದರು.
ಬಿಲ್ ಕೆರೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಬುತ್ತಿರೊಟ್ಟಿ ಮಾಡಿಕೊಂಡು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಬಿಲ್ವಾಶ್ರಮ ಹಿರೇಮಠಕ್ಕೆ ಬಂದರು.
ಬಿಲ್ ಕೆರೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಬುತ್ತಿರೊಟ್ಟಿ ಮಾಡಿಕೊಂಡು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಬಿಲ್ವಾಶ್ರಮ ಹಿರೇಮಠಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.